ಧಾರವಾಡ –
ಈಗಾಗಲೇ ಪೊಲೀಸರು ಹಗಲಿರುಳು ಎನ್ನದೇ ಕರೋನಾದಂತಹ ಮಹಾಮಾರಿ ಹಾವಳಿ ನಡುವೆಯೂ ತಮ್ಮ ಕರ್ತವ್ಯ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸುತಿದ್ದಾರೆ. ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿವುಳ್ಳವರು ಸಾಮಾಜಿಕ ಜವಾಬ್ದಾರಿ ಮರೆತು ಪೊಲೀಸರ ಜೊತೆಗೆ ಅನುಚಿತ ವರ್ತನೆ ಮಾಡುತಿದ್ದಾರೆ. ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಇಷ್ಟೇಲ್ಲ ಮಾಡಿದ್ರು ಅವರು ಮಾಡಿದ ತಪ್ಪು ಏನು ಇಲ್ಲ ಎಂಬಂತೆ ಬಿಂಬಿಸಲು ಹೊರಟಿದ್ದಾರೆ.

ಕಾರಣ ಇದೊಂದು ಕಾನೂನು ವ್ಯವಸ್ಥೆಗೆ ಧಕ್ಕೆ ತರುವಂತಹ ಬೆಳವಣಿಗೆ. ಕಾರಣ ಕೇಂದ್ರ ಗೃಹ ಸಚಿವರಾದ ಅಮಿತ ಶಾ , ರಾಜ್ಯ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಹಾಗೂ ಹಿರಿಯ ಅಧಿಕಾರಿಗಳು ಈ ಘಟನೆ ಕುರಿತು ವಿಶೇಷ ಕಾಳಜಿ ವಹಿಸಿ ತಪ್ಪಿಸ್ಥರಾದವರ ಮೇಲೆ ಕ್ರಮಕೈಗೋಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಶ್ರೀಶೈಲಗೌಡ ಕಮತರ, ಸಾಮಾಜಿಕ ಕಾರ್ಯಕರ್ತರಾದ ರೇಖಾ ಹೊಸೂರ, ಈರಣ್ಣ ಬಾರಕೇರ,ಶಂಕರ ಪೂಜಾರ, ರತ್ನಾ ಗಂಗಣ್ಣವರ, ಧನರಾಜ್ ಚಂದಾವರಿ ಮುಂತಾದವರು ಒತ್ತಾಯಿಸಿದ್ದಾರೆ. ಈ ಕುರಿತಂತೆ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗೆ ಮನವಿಯನ್ನು ಕೊಟ್ಟು ಕೂಡಲೇ ನಮ್ಮ ಪೊಲೀಸರಿಗೆ ಸೂಕ್ತ ಭದ್ರತೆಯೊಂದಿಗೆ ಆತ್ಮಸ್ಥೈರ್ಯ ವನ್ನು ತುಂಬುವಂತೆ ಒತ್ತಾಯವನ್ನು