ಹುಬ್ಬಳ್ಳಿ –
ಸಾರ್ ನನಗೆ ಹುಷಾರಿಲ್ಲ ನಾನು ಮದುವೆಗೆ ಹೋಗಿದ್ದೆ ಅದರಿಂದ ನನಗೆ ಕೋವಿಡ್ ಬಂದಿದೆ ಹುಷಾರಾಗುವವರೆಗೆ ನಾನು ಕರ್ತವ್ಯಕ್ಕೆ ಬರೋದಿಲ್ಲ ಅನುಮತಿಸಿ ಎನ್ನುತ್ತಲೇ ಆಸ್ಪತ್ರೆಯಿಂದ ಆಸ್ಪತ್ರೆಯ ಬೆಡ್ ಮೇಲೆ ಮಲಗಿಕೊಂಡು ಪೊಟೊ ಕಳಿಸಿದ್ದ ಹುಬ್ಬಳ್ಳಿ ತಾಲ್ಲೂಕಿನ ಅಕ್ಷರ ದಾಸೋಹದ ಸಹಾಯ ಕ ನಿರ್ದೇಶಕ ಶ್ರೀಧರ್ ಪತ್ತಾರ್ ಕೋವಿಡ್ ನಿಂದಾಗಿ ಮೃತರಾಗಿದ್ದಾರೆ.

ಹೌದು ಪರಿಚಯದವರ ಮದುವೆಗೆ ತೆರಳಿದ್ದ ಇವರಿ ಗೆ ನಂತರ ಸೋಂಕು ಕಾಣಿಸಿಕೊಂಡು ಬಾಗಲಕೋ ಟೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು ಚಿಕಿತ್ಸೆ ಯನ್ನು ಪಡೆದುಕೊಳ್ಳುತ್ತಿದ್ದ ಇವರು ಚಿಕಿತ್ಸೆ ಫಲಿಸ ದೇ ನಿಧನರಾಗಿದ್ದಾರೆ.

ಸಾರ್ ನನಗೆ ಹುಷಾರಿಲ್ಲ ರಜೆ ನೀಡಿ ಅನುಮತಿಸಿರಿ ಎನ್ನುತ್ತಲೇ ಆಸ್ಪತ್ರೆಯಿಂದ ಪೊಟೊದೊಂದಿಗೆ ಸಂದೇಶವನ್ನು ಕಳಿಸಿದ್ದ ಶ್ರೀಧರ್ ಅವರು ಗುಣಮು ಖರಾಗದೇ ಚಿಕಿತ್ಸೆ ಫಲಿಸದೇ ಮೃತರಾಗಿದ್ದಾರೆ. ಗುಣ ಮುಖರಾಗಲಿ ಎಂದು ಶಿಕ್ಷಕರು ಕುಟುಂಬದವರು ಆಪ್ತರು ಜಿಲ್ಲೆಯ ಇಲಾಖೆಯ ಅಧಿಕಾರಿಗಳು ಪ್ರಾರ್ಥನೆ ಮಾಡಿದ್ದರು ಅವರ ಪ್ರಾರ್ಥನೆ ದೇವರಿಗೆ ಕೇಳಿಸಲಿಲ್ಲ ಸಂಜೆ ನಿಧನರಾಗಿದ್ದಾರೆ.

ಇವರೊಬ್ಬರು ಒಳ್ಳೇಯ ದಕ್ಷ ಪ್ರಾಮಾಣಿಕ ಅಧಿಕಾ ರಿಯಾಗಿದ್ದರು.ಇನ್ನೂ ಇವರ ನಿಧನಕ್ಕೆ ಜಿಲ್ಲೆಯ ಡಿಡಿಪಿಐ ಎಮ್ ಎಲ್ ಹಂಚಾಟೆ,ಬಿಇಓ ಅಶೋಕ ಸಿಂದಗಿ,ಶ್ರೀಶೈಲ ಕರಿಕಟ್ಟಿ, ಶಿಕ್ಷಕರಾದ ವಿರೇಶ ಸಕ್ಕರ ನಾಯ್ಕರ,ಹನುಮಂತ ಬುದಿಹಾಳ,ನಾಗರಾಜ ಕಾಮನಹಳ್ಳಿ,ಗುರು ತಿಗಡಿ ,ಮಲ್ಲಿಕಾರ್ಜುನ ಉಪ್ಪಿ ನ, ಕಿರಣ ರಘುಪತಿ,ಪವಾಡೆಪ್ಪ,ಎಂ ಐ ಮುನವಳ್ಳಿ, ಶರಣಬಸವ ಬನ್ನಿಗೋಳ,ಎಸ್ ಎಫ್ ಪಾಟೀಲ, ಎಲ್ ಐ ಲಕ್ಕಮ್ಮನವರ ಪಿ ಎಸ್ ಅಂಕಲಿ ಶರಣು ಪೂಜಾರ, ಸಂಗಮೇಶ ಖನ್ನಿನಾಯ್ಕರ, ಚಂದ್ರಶೇ ಖರ್ ಶೆಟ್ರು,ಹನುಮಂತಪ್ಪ ಬೂದಿಹಾಳ,ಎನ್ ಎಂ ಕುಕನೂರ, ಆರ್ ಎಂ ಕಮ್ಮಾರ, ಜಿ ಟಿ ಲಕ್ಷ್ಮೀದೇ ವಮ್ಮ ಕೆ ಬಿ ಕುರಹಟ್ಟಿ, ಎಂ ವಿ ಕುಸುಮಾ ಜೆ ಟಿ ಮಂಜುಳಾ, ರಾಜಶ್ರೀ ಪ್ರಭಾಕರ,ಆರ್ ನಾರಾಯ ಣಸ್ವಾಮಿ ಚಿಂತಾಮಣಿ, ಬಾಬಾಜಾನ ಮುಲ್ಲಾ, ರಂಜನಾ ಪಂಚಾಳ ಸುವರ್ಣ ನಾಯ್ಕ ಕೆ ನಾಗರಾಜ, ಬಿ ಎಸ್ ಮಂಜುನಾಥ,ಅಕ್ಕಮಹಾದೇವಿ ನೂಲ್ವಿ, ಸೇರಿದಂತೆ ಹಲವರು ಭಾವಪೂರ್ಣ ಸಂತಾಪ ಸೂಚಿಸಿ ನಮನವನ್ನು ಸಲ್ಲಿಸಿದ್ದಾರೆ.
ಮಂಜುನಾಥ ಬಡಿಗೇರ (ಸೌಂದರ್ಯ) ಸುದ್ದಿ ಸಂತೆ ನ್ಯೂಸ್ ಧಾರವಾಡ