ಹುಬ್ಬಳ್ಳಿ –
ಮಹಾಮಾರಿ ಕರೋನಾ ಚೈನ್ ಕಟ್ಟಿಹಾಕಲು ನಾಳೆಯಿಂದ ಧಾರವಾಡ ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರೆಸಲಾಗುತ್ತಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.ಈ ಕುರಿತಂತೆ ಜಗದೀಶ್ ಶೆಟ್ಟರ್ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಮಾಹಿತಿಯ ನ್ನು ಅಪ್ಡೇಟ್ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಕಠಿಣ ಲಾಕ್‌ಡೌನ್ ಕುರಿತು ಚರ್ಚೆ ಯ ನಂತರ ಸಚಿವರು ಈ ಒಂದು ಮಾಹಿತಿಯನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಸಾರ್ವಜನಿಕರಿಗೆ ನೀಡಿ ದ್ದಾರೆ.ಇದಕ್ಕೂ ಮುನ್ನ ಹುಬ್ಬಳ್ಳಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಕಠಿಣ ಲಾಕ್ ಡೌನ್ ಮಾಡುವ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಜಗದೀ ಶ್ ಶೆಟ್ಟರ್ ಸರ್ಕ್ಯೂಟ್ ಹೌಸ್‌ನಲ್ಲಿ ಅಧಿಕಾರಿಗ ಳೊಂದಿಗೆ ಚರ್ಚಿಸಿದರು.

ವಾರಂತ್ಯದ ಲಾಕ್‌ಡೌನ್ ಮಾದರಿಯಲ್ಲಿ ವಾರದ 5 ದಿನ ಕಠಿಣ ಲಾಕ್‌ಡೌನ್ ಮಾಡಿ ಗುರುವಾರ ಮತ್ತು ಶುಕ್ರವಾರ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಖರೀ ದಿಗೆ ಅವಕಾಶ ನೀಡಿವ ಕುರಿತು ಸಚಿವರು ಸಲಹೆ ನೀಡಿದರು ನಂತರ ಸಚಿವರ ಸಲಹೆ ಸೂಚನೆಯಂತೆ ನಾಳೆಯಿಂದ ಜೂನ್ 7 ರವರೆಗೆ ಜಿಲ್ಲೆಯಲ್ಲಿ ವಾರ ದಲ್ಲಿ ಎರಡು ದಿನಗಳನ್ನು ಹೊರತು ಪಡಿಸಿ ಸಂಪೂ ರ್ಣ ಲಾಕ್ ಡೌನ್ ಗೆ ಸೂಚನೆಗಳನ್ನು ಜಗದೀಶ್ ಶೆಟ್ಟರ್ ಮಾಹಿತಿ ನೀಡಿದರು

ಧಾರಾವಾಡ ಜಿಲ್ಲೆಯ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ತತ್ಞರ ಅಭಿಪ್ರಾಯದಂತೆ ಕೋವಿ ಡ್-19 ನಿಯಂತ್ರಣಕ್ಕಾಗಿ ದಿನಾಂಕ 24-05-2021 ರಿಂದ 07- 06 -2021 ರ ವರೆಗೆ ಲಾಕ್ ಡೌನ್ ವಿಸ್ತ ರಿಸಲು ತಿರ್ಮಾನಿಸಲಾಗಿದೆ.ಇನ್ನೂ ಈ ಒಂದು ಈ ಅವಧಿಯಲ್ಲಿ ವೈದ್ಯಕೀಯ ಸೇವೆಗಳು ಸೇರಿದಂತೆ ಮುಂಜಾನೆ 6 ರಿಂದ 8 ರ ವರೆಗೆ ಹಾಲು, ತರಕಾರಿಗೆ ಅಷ್ಟೇ ಅವಕಾಶ ನೀಡಲಾಗಿದ್ದು ಇನ್ನುಳಿದಂತೆ ಯಾವುದೇ ಚಟುವಟಿಕೆಗಳಿಗೆ ಅವಕಾಶ ಇರುವು ದಿಲ್ಲ.ಇನ್ನೂ ಗುರುವಾರ,ಶುಕ್ರವಾರ ದಂದು ಮಾತ್ರ ಮುಂಜಾನೆ 6 ರಿಂದ 10 ರ ವರೆಗೆ ದಿನ ನಿತ್ಯದ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿ ರುತ್ತದೆ.ಅದರಲ್ಲೂ ಈ ಹಿಂದೆ ಇದ್ದ ಎಲ್ಲಾ ಪಾರ್ಸಲ್ ವ್ಯವಸ್ಥೆಗೆ ಕಡಿವಾಣ ಹಾಕಲಾಗಿದೆ.ಹೊಟೇಲ್ ಸರಾಯಿ ಸೇರಿದಂತೆ ಎಲ್ಲಾ ಪಾರ್ಸಲ್ ಗೆ ಅವಕಾಶ ವನ್ನು ನೀಡಲಾಗಿಲ್ಲ.

ಕೋವಿಡ್ ಚೈನ್ ಬ್ರೇಕ್ ಮಾಡಲು ಈ ಕಟ್ಟುನಿಟ್ಟಿನ ಲಾಕ್ ಡೌನ್ ಅನಿವಾರ್ಯವಾಗಿದ್ದು ಸಾರ್ವಜನಿ ಕರು ಮನೆಯಿಂದ ಆಚೆ ಬರದೇ ನಿಯಮ ಪಾಲ ನೆಯ ಕರ್ತವ್ಯ ನಿಭಾಯಿಸಬೇಕೆಂದು ಸಚಿವರು ಹೇಳಿದ್ದಾರೆ.ಇನ್ನೂ ಪೂರ್ವಭಾವಿಯಾಗಿ ನಡೆದ ಈ ಒಂದು ಸಭೆಯಲ್ಲಿ ಜಿಲ್ಲಾಧಿಕಾರಿ ನಿತೀಶ್ ಪಾಟೀ ಲ್, ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾದ ಲಾಬುರಾಮ್, ಧಾರವಾಡ ಪೊಲೀಸ್ ವರಿಷ್ಠಾಧಿ ಕಾರಿ ಪಿ.ಕೃಷ್ಣಕಾಂತ್, ಮಹಾನಗರ ಪಾಲಿಕೆ ಆಯು ಕ್ತ ಡಾ.ಸುರೇಶ್ ಇಟ್ನಾಳ್ ಸೇರಿದಂತೆ ಹಲವರು ಈ ಒಂದು ಸಭೆಯಲ್ಲಿ ಪಾಲ್ಗೊಂಡಿದ್ದರು