ಧಾರವಾಡ –
ನವನಗರದ ವಕೀಲರ ಮತ್ತು ಇನ್ಸ್ಪೆಕ್ಟರ್ ನಡುವಿನ ಗಲಾಟೆ ಮುಗಿಯುವಂತಹ ಲಕ್ಷಣಗಳು ಕಾಣುತ್ತಿಲ್ಲ. ವಕೀಲ ವಿನೋದ ಪಾಟೀಲ್ ಬಂಧನದ ವಿರುದ್ಧ ಸಿಡಿದೆದ್ದಿರುವ ವಕೀಲರು ಸಭೆಯ ಮೇಲೆ ಸಭೆಗಳನ್ನು ನಡೆಸಿದರು. ಅಂತಿಮವಾಗಿ ಇಂದು ನಡೆದ ಸಭೆಯಲ್ಲಿ ಸೋಮವಾರದ ಒಳಗಾಗಿ ಇನ್ಸ್ಪೆಕ್ಟರ್ ಪ್ರಭು ಸೂರಿನ್ ಅಮಾನತು ಮಾಡಬೇಕು.

ಅವರ ಮೇಲೆ ಪ್ರಕರಣ ದಾಖಲಿಸಿ ಇಲಾಖೆಯ ತನಿಖೆಗೆ ಒಳಪಡಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.ಇಂದು ಧಾರವಾಡದ ವಕೀಲರ ಸಂಘದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡು ಸೋಮವಾರದ ವರೆಗೆ ಗಡುವು ನೀಡಿದರು.

ಸೋಮವಾರದ ಒಳಗಾಗಿ ಮಾಡದಿದ್ದರೆ ಅಂದು ನವನಗರದಲ್ಲಿರುವ ಪೊಲೀಸ್ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲು ತೀರ್ಮಾನ ಕೈಗೊಳ್ಳಲಾಯಿತು. ಧಾರವಾಡದಲ್ಲಿ ನಡೆದ ಸಭೆಯಲ್ಲಿ ವಕೀಲರ ಸಂಘದ ಅಧ್ಯಕ್ಷರು ಸರ್ವ ಸದಸ್ಯರು ತಾಲ್ಲೂಕಿನ ಅಧ್ಯಕ್ಷರು ಸೇರಿದಂತೆ ಹಲವು ನ್ಯಾಯವಾದಿಗಳು ಪಾಲ್ಗೊಂಡಿದ್ದರು.