ಬೆಳಗಾವಿ –
ಮುಖ್ಯಮಂತ್ರಿ ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ರಾಯಕೀಯ ನಾಯಕರ ದಂಡು ಕುಂದಾನಗರಿ ಬೆಳಗಾವಿಗೆ ಬರಲಿದ್ದಾರೆ. ನಾಳೆ ಶುಕ್ರವಾರ, ಶನಿವಾರ ಬೆಳಗಾವಿಗೆ ರಾಜಕೀಯ ನಾಯಕರ ದಂಡು ಹರಿದುಬರಲಿದೆ.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವಾರು ಮಂತ್ರಿಗಳು, ಧುರೀಣರು ಬೆಳಗಾವಿಯಲ್ಲಿರಲಿದ್ದಾರೆ.ಒಂದು ಕಡೆ ನಾಳೆ ಶುಕ್ರವಾರ ಬಿಜೆಪಿ ಕೋರ್ ಕಮಿಟಿ ಸಭೆ ಮತ್ತು ಶನಿವಾರ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆ ನಡೆಯಲಿರುವುದರಿಂದ ಸಿಎಂ ಯಡಿಯೂರಪ್ಪ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಆರ್.ಅಶೋಕ, ಕೇಂದ್ರ ಪ್ರಹ್ಲಾದ್ ಜೋಶಿ ಮೊದಲಾದವರ ಪ್ರವಾಸ ಪಟ್ಟಿ ಈಗಾಗಲೆ ಬಂದಿದೆ.ಇದರೊಂದಿಗೆ ಬಿಜಿಪಿಯ ಹಲವು ನಾಯಕರು ಗಣ್ಯರು ಬೆಳಗಾವಿಗೆ ಬರಲಿದ್ದಾರೆ.

ಮಂತ್ರಿಗಳು ಹಾಗೂ ಕೇಂದ್ರ ನಾಯಕರು ಸೇರಿ ಬಿಜೆಪಿಯ ಒಟ್ಟೂ 149 ಗಣ್ಯರು ಅಂದಿನ ಕಾರ್ಯಕಾರಿಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾಲೇಜು ರಸ್ತೆಯ ಗಾಂಧಿ ಭವನದಲ್ಲಿ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ನಗರದಲ್ಲಿ ಸಂಚಾರ ದಟ್ಟಣೆ ಕಾಣಿಸಿಕೊಳ್ಳಲಿದ್ದು ಇದಕ್ಕಾಗಿ ಈಗಾಗಲೇ ನಮ್ಮ ಬೆಳಗಾವಿ ಪೊಲೀಸರು ಎಲ್ಲಾ ಸಿದ್ದತೆಯನ್ನು ಮಾಡಿಕೊಂಡಿದ್ದಾರೆ.
ಸಿದ್ದರಾಮಯ್ಯ ಪ್ರವಾಸ
ಇದರ ಜೊತೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಬೆಳಗಾವಿಗೆ ಆಗಮಿಸಲಿದ್ದಾರೆ.

ಅವರು ಮಧ್ಯಾಹ್ನ 12.45ಕ್ಕೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಸಿದ್ದರಾಮಯ್ಯ ಅಲ್ಲಿಂದ ತೇರದಾಳಕ್ಕೆ ತೆರಳುವರು. ಸಂಜೆ 5.30ಕ್ಕೆ ಪುನಃ ಬೆಳಗಾವಿಗೆ ಆಗಮಿಸಿ ವಿಮಾನದ ಮೂಲಕ ಬೆಂಗಳೂರಿಗೆ ತೆರಳುವರು.