ಬೆಂಗಳೂರು –
ಯುವ ಉತ್ಸಾಹಿ ಶಾಸಕ ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನವನ್ನು ನೀಡುವಂತೆ ನಾಡಿನ ಹಿರಿಯ ಕವಿ ಡಾ ಚೆನ್ನವೀರ ಕಣವಿ ಒತ್ತಾಯವನ್ನು ಮಾಡಿದ್ದಾರೆ.ಧಾರವಾಡ ದಲ್ಲಿ ಮಾತನಾಡಿದ ಅವರು ಇದರೊಂದಿಗೆ ಧ್ವನಿ ಎತ್ತಿದ್ದಾರೆ
ಇನ್ನೂ ಅತ್ತ ರಾಜ್ಯ ಸಂಪುಟ ರಚನೆಯ ಮೇಲೆ ಎಲ್ಲರ ಚಿತ್ತವಿದ್ದು ಏನಾಗುತ್ತದೆ ಏನೋ ಎಂಬ ದೊಡ್ಡ ಚಿಂತೆಯಲ್ಲಿ ಎಲ್ಲರಿದ್ದು ಇಂದು ಅಥವಾ ನಾಳೆ ಇದಕ್ಕೆ ತೆರೆ ಬೀಳಲಿದ್ದು ಕುತೂಹಲಕ್ಕೆ ತೆರೆ ಬೀಳುವ ಸಾಧ್ಯತೆಯ ನಡುವೆ ನೂತನ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟಕ್ಕೆ ಶಾಸಕ ಅರವಿಂದ ಬೆಲ್ಲದ ಸೇರಿಸಿಕೊ ಳ್ಳುವಂತೆ ಒತ್ತಾಯ ಮಾಡಿದ್ದಾರೆ
ತಮ್ಮ ಸಮುದಾಯಕ್ಕೆ ತಮ್ಮ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂಬ ಹೋರಾಟಗಳು ತೀವ್ರವಾಗಿರುವ ನಡುವೆ ಶಾಸಕ ಅರವಿಂದ್ ಬೆಲ್ಲದ್ ಪರ ಹಿರಿಯ ಕವಿ ಚೆನ್ನವೀರ ಕಣವಿ ಧ್ವನಿ ಎತ್ತಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಕವಿ ಚೆನ್ನವೀರ ಕಣವಿ ಅರವಿಂದ್ ಬೆಲ್ಲದ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯವನ್ನು ಮಾಡಿದ್ದಾರೆ