ಧಾರವಾಡ –
ಕೆಲವೊಂದಿಷ್ಟು ಬೇಡಿಕೆಗಳನ್ನು ಮುಂದಿಟ್ಟು ಕೊಂಡು ಧಾರವಾಡದಲ್ಲಿ ಖಾಸಗಿ ಅನುದಾನಿಕ ಶಾಲಾ ಶಿಕ್ಷಕರು ಪ್ರತಿಭಟನೆ ಮಾಡಿದರು.ಖಾಸಗಿ ಶಿಕ್ಷಣ ಸಂಸ್ಥೆಗಳು ನೇಮಕ ಮಾಡಿಕೊಂಡ ಶಿಕ್ಷಕರ ಹುದ್ದೆಗಳನ್ನು ಲೋಪದೋಷ ಹುಡುಕದೇ ಅನು ಮೋದಿಸಬೇಕು.
ಎಂದು ಜಿಲ್ಲಾ ಅಪರ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ್ ಕಾಲಿಗೆ ಬಿದ್ದು ಕಣ್ಣೀರು ಹಾಕಿ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ 150 ಕ್ಕೂ ಹೆಚ್ಚು ಶಿಕ್ಷಕರು ಭಾಗಿಯಾಗಿ ತಮ್ಮ ಅಳಲು ತೋಡಿಕೊಂ ಡರು.
ಇದೇ ವೇಳೆ ಹಾವೇರಿ ಜಿಲ್ಲೆ ಹಿರೇಕೆರೂರ ನಿಂದ ಬಂದಿದ್ದ ಶಿಕ್ಷಕರೊಬ್ಬರೂ ಅಪರ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ್ ಕಾಲಿಗೆ ಬಿದ್ದು ಕಳೆದ 10 ವರ್ಷಗಳಿಂದ ಸಂಬಳ ಇಲ್ಲದೆ ದುಡಿಯುತ್ತಿದ್ದೇನೆ. ನನ್ನ ಕುಟುಂಬದ ಪರಿಸ್ಥಿತಿ ಏನಾಗಬೇಕು ಶಿಕಾರಿ ಪುರದಿಂದ ಹಾವೇರಿಗೆ 70 ಕಿಲೋ ಮೀಟರ್ ಬೈಕ್ ಮೇಲೆ ಬಂದು ಮಕ್ಕಳಿಗೆ ಕನ್ನಡ ಶಿಕ್ಷಕನಾಗಿ ಪಾಠ ಕಲಿಸುತ್ತಿದ್ದೇನೆ.
ಜಿಲ್ಲೆಯಲ್ಲಿ ನಮ್ಮ ಶಾಲೆಯಿಂದ 5 ವಿದ್ಯಾರ್ಥಿಗಳು ಕನ್ನಡ ವಿಷಯಕ್ಕೆ 125/125 ತೆಗೆಯುವಂತೆ ಪಾಠ ಮಾಡಿದ್ದೇನೆ. ಸದ್ಯ ಹಾವೇರಿಯಿಂದ ಧಾರವಾಡಕ್ಕೆ ಪ್ರತಿಭಟನೆಗೆ ಬರಬೇಕಾದ್ರು ಸಾಲ ಮಾಡಿಕೊಂಡು ಬಂದಿದ್ದೇನೆ. ನನ್ನಂತೆ ಎಲ್ಲಾ ಶಿಕ್ಷಕರ ಪಾಡು ಇದೆ.
ಟಾಪ್ ಹತ್ತರ ಒಳಗೆ ಇರೋ ಶಿಕ್ಷಕರ ಸಾಮರ್ಥ್ಯ ನೋಡಿ ಆದರೂ ಅನುಮೋದಿಸಿ ಎಂದು ಬೇಡಿ ಕೊಂಡರು.ಇನ್ನೂ ಕಾರವಾರದಿಂದ ಬಂದಿದ್ದ ಶಿಕ್ಷಕಿ ಯೊಬ್ಬಳು ಸಹ ಕೆಲವು ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುದ್ದೇನೆ.
ಕೊರೋನ ಆತಂಕ ಇದ್ರೂ ಮಕ್ಕಳನ್ನು ಕರೆದು ಕೊಂಡು ಪ್ರತಿಭಟನೆಗೆ ಬಂದಿದ್ದೇವೆ ದಯವಿಟ್ಟು ನಮ್ಮ ಸಮಸ್ಯೆ ಆಲಿಸಿ ಪರಿಹಾರ ನೀಡಿ ಎಂದು ಕಣ್ಣೀರಿಟ್ಟು ತಮ್ಮ ಅಳಲು ತೋಡಿಕೊಂಡರು. ಇನ್ನೂ ಪ್ರತಿಭಟನೆ ಕುರಿತು ಸಿದ್ದಲಿಂಗಯ್ಯ ಹಿರೇ ಮಠ ಅಪರ ಆಯುಕ್ತರು ಮಾತನಾಡಿ
ಕರ್ನಾಟಕ ಶಿಕ್ಷಣ ಕಾಯ್ದೆ 1999 ಪ್ರಕಾರ ಕಾಲಕಾಲಕ್ಕೆ ಸುತ್ತೋಲೆಗಳನ್ನು ಪರಿಗಣಿಸಿ ಆಡಳಿತ ಮಂಡಳಿ, ಮತ್ತು ಶಿಕ್ಷಣ ಪ್ರಾಧಿಕಾರ ಈ ಕುರಿತು ಶಿಕ್ಷಣ ಇಲಾಖೆಯ ಅನುಮತಿ ತೆಗೆದುಕೊಂಡು ನಿರ್ಣಯ ತೆಗೆದುಕೊಳ್ಳಬೇಕು ಎನ್ನುತ್ತಾ ಭರವಸೆ ಯನ್ನು ನೀಡಿದರು.ಮಾಜಿ ಶಾಸಕ ಎನ್ ಹೆಚ್ ಕೊನರಡ್ಡಿ ಸೇರಿದಂತೆ ಹಲವರು ಶಿಕ್ಷಕರ ಹೋರಾಟಕ್ಕೆ ಸಾಥ್ ನೀಡಿದರು