ಧಾರವಾಡ –
ಕಲಿತ ಶಾಲೆಗೆ CRP ಯೊಬ್ಬರು ಸುಣ್ಣ ಬಣ್ಣ ಗಳಿಂದ ಶಾಲೆಯನ್ನು ಮಧುಮಗಳಂತೆ ಶೃಂಗಾರ ಮಾಡಿದ ಚಿತ್ರಣ ವೊಂದು ಧಾರವಾಡದಲ್ಲಿ ಕಂಡು ಬಂದಿದೆ.ಹೌದು ತಡಕೋಡ ಹಿರಿಯ ಪ್ರಾಥಮಿಕ ಶಾಲೆ ಗೆ ಈಗ ಹೊಸ ರೂಪವನ್ನು ನೀಡಿದ್ದಾರೆ
ರುದ್ರೇಶ ಕುರ್ಲಿ ಸಿ ಆರ್ ಪಿ ತಡಕೋಡ, ಧಾರವಾಡದ ಪ್ರತಿಷ್ಠಿತ ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಧಾರವಾಡ ಜಿಲ್ಲೆಯ ಸಂಚಾಲಕರಾಗಿದ್ದಾರೆ ಇವರೇ ಶಾಲೆಗೆ ಹೊಸ ರೂಪವನ್ನು ನೀಡಿದ್ದಾರೆ.
ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ,ನಿವೃತ್ತ ಯೋಧರಾದ ರಮೇಶ ಗೋಕಾವಿ ಯುವ ಶಿಕ್ಷಣ ಸೇವಕ ಬಸವರಾಜ ಮಾಧಮಭಾವಿ,ಮುತ್ತು ಮಂಜುನಾಥ ಕುಲಕರ್ಣಿ ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಯ ಅದ್ಯಕ್ಷರಾದ ರಾಜಶೇಖರ ಹುಣಸಿಕಟ್ಟಿ ಹಾಗೂ ಹಳೆಯ ವಿದ್ಯಾರ್ಥಿ ಬಳಗವನ್ನು ಸೇರಿಸಿಕೊಂಡು ಶಾಲೆಗೆ ಸುಣ್ಣ ಬಣ್ಣ, ನುಡಿಮುತ್ತುಗಳ ಬರಹ ಮಾಡಿದ್ದಾರೆ
ಇಂದಿನಿಂದ ಒಂದರಿಂದ ಐದನೆಯ ತರಗತಿಯ ಮಕ್ಕಳು ಶಾಲೆಗೆ ಆಗಮಿಸುತ್ತಿದ್ದು ಅವರನ್ನು ಸ್ವಾಗತಿಸಲು ಶಾಲೆಯ ನ್ನು ಸುಂದರಗೊಳಿಸಿದ್ದಾರೆ ಇವರಿಗೆ ಸಂಸ್ಥೆಯ ವತಿಯಿಂದ ಧನ್ಯವಾದಗಳು.ಭೀಮಪ್ಪ ಕಾಸಾಯಿ ಗೌರವಾದ್ಯಕ್ಷರಾದ ಎಲ್ ಐ ಲಕ್ಕಮ್ಮನವರ ಅಧ್ಯಕ್ಷರು ಅಕ್ಬರಲಿ ಸೋಲಾಪುರ ಕಾರ್ಯಾದ್ಯಕ್ಷರಾದ ಅಜೀತಸಿಂಗ ರಜಪೂತ ಕೋಶಾದ್ಯ ಕ್ಷರಾದ ಚಂದ್ರಶೇಖರ ತಿಗಡಿ ಪ್ರದಾನ ಕಾರ್ಯದರ್ಶಿ ಹಾಗೂ ಸರ್ವ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದರು