ಧಾರವಾಡ –
ಧಾರವಾಡದ ಎಸ್ ಡಿಎಮ್ ಆಸ್ಪತ್ರೆಯಲ್ಲಿ ಮತ್ತೆ ಕರೋನಾ ಸೊಂಕಿತರ ಸಂಖ್ಯೆ ಹೆಚ್ಚಾಗಿದೆ. ನಿನ್ನೆ 66 ಇದ್ದ ಪಾಸಿಟಿವಿಟಿ ಸಂಖ್ಯೆ ಹೆಚ್ಚಳವಾಗಿದ್ದು ಮತ್ತೆ 116 ವಿದ್ಯಾರ್ಥಿಗಳಲ್ಲಿ ಪಾಸಿಟಿವಿಟಿ ಕಾಣಿಸಿಕೊಂಡಿದ್ದು ಕಂಡು ಬಂದಿದೆ. ಕಳೆದ ಮೂರು ನಾಲ್ಕು ದಿನಗಳ ಹಿಂದೆಯಷ್ಟೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಂತರ ಕಾಣಿಸಿಕೊಂಡ ಈ ಒಂದು ಸ್ಪೋಟವು ಇನ್ನೂ ಹೆಚ್ಚಾಗಲಿದ್ದು ಸಧ್ಯ ಸಂಖ್ಯೆ ಹೆಚ್ಚಾಗಿದೆ.
ಈಗಾಗಲೇ ನಿನ್ನೆಯಿಂದ ಸ್ಥಳದಲ್ಲೇ ಆರೋಗ್ಯ ಇಲಾಖೆಯ ಅಧಿಕಾರಿಗಳು ಜಿಲ್ಲಾಡಳಿತದ ಟೀಮ್ ಬೀಡು ಬಿಟ್ಟಿದ್ದು ಬಿಡುವಿಲ್ಲದೇ ಪರೀಕ್ಷೆಯನ್ನು ಮಾಡಲಾಗುತ್ತಿದ್ದು ಫಲಿತಾಂ ಶಕ್ಕಾಗಿ ಕಾಯಲಾಗುತ್ತಿದ್ದು ಇನ್ನೂ ಈಗಾಗಲೇ ಎಸ್ ಡಿಎಮ್ ಆಸ್ಪತ್ರೆಯಲ್ಲಿನ ಎರಡು ಹಾಸ್ಟೇಲ್ ಗಳನ್ನು ಶೀಲ್ ಡೌನ್ ಮಾಡಲಾಗಿದ್ದು ಇನ್ನೂ ಕೆಲವು ವಿದ್ಯಾರ್ಥಿಗಳನ್ನು ಕ್ವಾರಂಟೈನ್ ಮಾಡಲಾಗಿದ್ದು ಇತ್ತ ಮತ್ತೊಂದು ಕಡೆಗೆ ಸಾಮೂಹಿಕವಾಗಿ ವಿದ್ಯಾರ್ಥಿಗಳ ಮತ್ತು ಆಸ್ಪತ್ರೆಯಲ್ಲಿನ ಸಿಬ್ಬಂದಿಗಳ ಪರೀಕ್ಷೆ ಮಾಡಲಾಗುತ್ತಿದ್ದು ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ.
ಇನ್ನೂ ಫಲಿತಾಂಶ ಹೆಚ್ಚಾಗುವ ಸಾಧ್ಯತೆ ಇದ್ದು ಧಾರವಾಡ ಮತ್ತು ಎಸ್ ಡಿ ಎಸ್ ಆಸ್ಪತ್ರೆಯಲ್ಲಿ ಆತಂಕ ಮೂಡಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು.
ಈ ನಡುವೆ ಈವರೆಗೆ ಕಾಣಿಸಿಕೊಂಡ ವಿದ್ಯಾರ್ಥಿಗಳಲ್ಲಿ ಯಾವ ವಿದ್ಯಾರ್ಥಿಯೂ ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಆರೋಗ್ಯದಲ್ಲಿ ತೊಂದರೆ ಕಂಡು ಬಂದಿಲ್ಲ ಸಾಮಾನ್ಯ ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಇನ್ನೂ ಈ ಒಂದು ವಿಚಾರ ಕುರಿತು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸುದ್ದಿ ಸಂತೆ ಯೊಂದಿಗೆ ಮಾತನಾಡಿ ಹೇಳಿದ್ದು ಹೀಗೆ