ಧಾರವಾಡ –
ಕಟ್ಟಿಕೊಂಡ ಗಂಡನನ್ನು ಮಹಿಳೆಯೊಬ್ಬಳು ಕೊಲೆ ಮಾಡಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ. ತಾಲ್ಲೂಕಿನ ಮುಳಮುತ್ತಲ ಗ್ರಾಮದಲ್ಲಿ ಈ ಒಂದು ಕೊಲೆ ನಡೆದಿದೆ. ಅನೈತಿಕ ಸಂಭಂಧದಿಂದ ಮಹಿಳೆಯೊಬ್ಬಳು ತನ್ನ ಗಂಡನನ್ನು ಪ್ರೀಯಕನಿಂದಲೇ ಕೊಲೆ ಮಾಡಿಸಿದ್ದಾಳೆ. ಹೌದು ಧಾರವಾಡದ ಮುಳಮುತ್ತಲ ಗ್ರಾಮದಲ್ಲಿ ಅನೈತಿಕ ಸಂಭಂದ ಹಿನ್ನಲೆ ವ್ಯಕ್ತಿಯ ಬರ್ಬರ ಕೊಲೆ ನಡೆದಿದ್ದು ಪತ್ನಿಯೇ ಪ್ರಿಯಕರನಿಂದ ಗಂಡನ ಕೊಲೆ ಮಾಡಿಸಿದ್ದು ಶಿವು ನಿಂಬೋಜಿ ಎಂಬಾತ ಕೊಲೆ ಮಾಡಿದ ವ್ಯಕ್ತಿಯಾಗಿದ್ದಾನೆ
ಕೊಡಲಿಯಿಂದ ಹೊಡೆದು ಬರ್ಬರವಾಗಿ ಕೊಲೆಯನ್ನು ಮಾಡಲಾಗಿದ್ದು ಭೀಮಪ್ಪ ಸಿದ್ದಪ್ಪ ಕರಿಸಿದ್ದನ್ನವರ,30, ಮೃತ ವ್ಯಕ್ತಿಯಾಗಿದ್ದಾನ.ಧಾರವಾಡ ತಾಲೂಕಿನ ಮುಳ ಮುತ್ತಲ ಗ್ರಾಮದಲ್ಲಿ ನಡೆದಿದ್ದು ಇನ್ನೂ ಸುದ್ದಿ ತಿಳಿದ ಗರಗ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದು ಈಗಾಗಲೇ ಕೊಲೆ ಮಾಡಿದ ಸುಪಾರಿ ನೀಡಿದ ಇಬ್ಬರನ್ನು ಪೊಲೀಸರು ಬಂಧಿಸಿ ಪ್ರಕರಣವನ್ನು ದಾಖಲು ಮಾಡಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.


























