ಬೆಳಗಾವಿ –
ಈಗಾಗಲೇ ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ ಆರಂಭಗೊಂ ಡಿದ್ದರು ಕೂಡಾ ರಾಜ್ಯದ 53 ತಾಲ್ಲೂಕಿನಲ್ಲಿ ವರ್ಗಾವಣೆ ಇಲ್ಲದೆ ಶಿಕ್ಷಕರು ವಂಚಿತರಾಗಿದ್ದಾರೆ.ಹೌದು ಈಗಾಗಲೇ ಮತ್ತಷ್ಟು ಹುದ್ದೆ ಕೊರತೆಯಾಗದಿರಲಿ ಎಂಬ ಕಾರಣಕ್ಕೆ ಈಗಾಗಲೇ ಶೇ.25ರಷ್ಟು ಶಿಕ್ಷಕ ಹುದ್ದೆ ಖಾಲಿ ಇರುವ ತಾಲೂಕುಗಳನ್ನು ವರ್ಗಾವಣೆ ಪ್ರಕ್ರಿಯೆಯಿಂದ ಹೊರಗಿಡ ಲಾಗಿದೆ.ರಾಜ್ಯದಲ್ಲಿ ಇಂತಹ 53 ತಾಲೂಕುಗಳಿವೆ. ಇದರಿಂ ದಾಗಿ ಈ ತಾಲೂಕುಗಳಲ್ಲಿ ಕೆಲಸ ಮಾಡುತ್ತಿರುವ ಸುಮಾ ರು 50 ಸಾವಿರಕ್ಕೂ ಹೆಚ್ಚು ಶಿಕ್ಷಕರು ಹಲವು ವರ್ಷಗಳಿಂದ ಒಂದೇ ಕಡೆ ಕಾರ್ಯ ನಿರ್ವಹಿಸಿದ್ದರೂ ವರ್ಗಾವಣೆ ಪ್ರಕ್ರಿ ಯೆಯಲ್ಲಿ ಭಾಗವಹಿಸಲು ಅವಕಾಶವೇ ಇಲ್ಲವಾದಂತಾ ಗಿದೆ.
ಶೇ.25ರಷ್ಟು ಹುದ್ದೆ ಖಾಲಿ ಇರುವ ತಾಲೂಕುಗಳನ್ನು ಬ್ಲಾಕ್ ಮಾಡದೆ ಆ ತಾಲ್ಲೂಕು ಶಿಕ್ಷಕರಿಗೂ ವರ್ಗಾವಣೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.ಈ ಬಗ್ಗೆ ಹೋರಾಟ ನಡೆಸುತ್ತೇವೆ ಎಂದು ಹೇಳುತ್ತಲೇ ಇದ್ದಾರೆ ಸಂಘಟನೆ ಯ ನಾಯಕರು ಇನ್ನೂ ಇತ್ತ ಶಿಕ್ಷಕರು ಬೆಂಗಳೂರು ಚಲೋ ಹೋರಾಟಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದು ಶಿಕ್ಷಕರ ಧ್ವನಿಯಾ ಗಿ ಕೆಲಸ ಮಾಡಬೇಕಾದ ನಾಯಕರು ಮಾತ್ರ ಮೌನವಾಗಿ ರೊದು ದೊಡ್ಡ ದುರಂತವೇ ಸರಿ ಇನ್ನಾದರೂ ಶಿಕ್ಷಕರು ಬೀದಿಗಿಳಿಯುವ ಮುನ್ನವೇ ಸ್ಪಂದಿಸುತ್ತಾರೆನಾ ಎಂಬೊಂ ದನ್ನು ಕಾದು ನೋಡಬೇಕು