ಧಾರವಾಡ –
ಬೆಳ್ಳಂ ಬೆಳಿಗ್ಗೆ ಧಾರವಾಡದಲ್ಲಿ ಎರಡು ಕಡೆಗಳಲ್ಲಿ ಚೈನ್ ಸ್ನ್ಯಾಚಿಂಗ್ ಮಾಡಲಾಗಿದೆ ಹೌದು ಉಪನಗರ ಮತ್ತು ಶಹರ ಪೊಲೀಸ್ ಠಾಣೆ ಗಳ ವ್ಯಾಪ್ತಿಯಲ್ಲಿ ಚೈನ್ ಸ್ನ್ಯಾಚಿಂಗ್ ಮಾಡಲಾಗಿದೆ. ಹೌದು ಬೆಳಿಗ್ಗೆ ಈ ಒಂದು ಘಟನೆ ಗಳು ನಡೆದಿವೆ ನಗರದ ಲಿಂಗಾಯತ ಭವನದ ಮುಂದೆ ಇಡಲಾಗಿದ್ದ ಬೈಕ್ ನ್ನು ಕಳ್ಳತನ ಮಾಡಿ ಅಲ್ಲಿಂದ
ಉಪನಗರ ವ್ಯಾಪ್ತಿಯಲ್ಲಿನ ಶಿವಾಲಯ ಬಳಿ ಮೊದಲು ಚೈನ್ ಸ್ನ್ಯಾಚಿಂಗ್ ಮಾಡಿ ನಂತರ ಅಲ್ಲಿಂದ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಹೊಸ ಯಲ್ಲಾಪುರ ದಲ್ಲಿ ಮತ್ತೊಂದು ಕಡೆಗೆ ಚೈನ್ ಸ್ನ್ಯಾಚಿಂಗ್ ಮಾಡಿ ಖದೀಮರು ಎಸ್ಕೇಪ್ ಆಗಿದ್ದಾರೆ.ಇನ್ನೂ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡತಾ ಇದ್ದಾರೆ ಸಧ್ಯ ದೂರು ದಾಖಲು ಮಾಡಿಕೊಂಡ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ