ಧಾರವಾಡ –
ಹುಬ್ಬಳ್ಳಿ – ಧಾರವಾಡ ಅವಳಿ ನಗರದ ಜನನಿಬಿಡ ಹಾಗೂ ವಾಹನ ಸಂಚಾರ ದಟ್ಟಣೆ ಪ್ರದೇಶಗಳಲ್ಲಿ ಜಿಬ್ರಾ ಕ್ರಾಸಿಂಗ್ ಅಳವಡಿಸಬೇಕು.ಹಾಗೆ ಅಪಾಯಕಾರಿ ರಸ್ತೆ ಉಬ್ಬುಗ ಳನ್ನು ವೈಜ್ಞಾನಿಕವಾಗಿ ಸರಿಪಡಿಸಿ ರಿಫ್ಲೆಕ್ಟರುಗಳನ್ನು ಅಳವ ಡಿಸಬೇಕು ಎಂದು ಮಹಾನಗರಪಾಲಿಕೆ ಹಾಗೂ ಲೋಕೋ ಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಸೂಚಿಸಿ ದರು
ಧಾರವಾಡ -ಅಮ್ಮಿನಭಾವಿ- ಸವದತ್ತಿ ರಸ್ತೆಯಲ್ಲಿರುವ ಅವೈಜ್ಞಾನಿಕ ಉಬ್ಬುಗಳು ಅಪಾಯಕಾರಿಯಾಗಿದ್ದುಒಂದು ವಾರದೊಳಗೆ ಅವುಗಳನ್ನು ತೆರವುಗೊಳಿಸಬೇಕು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್‌ಗೆ ಸೂಚಿಸಿದರು.ನೈಋತ್ಯ ರೇಲ್ವೆಯ ವಿಭಾಗೀಯ ರೇಲ್ವೆ ವ್ಯವಸ್ಥಾಪಕ ಅರವಿಂದ ಮಾಳಖಂಡ ಮಾತನಾಡಿ ರೇಲ್ವೆ ಸ್ಟೇಶನ್ ಸುತ್ತಮುತ್ತ ಹಾಗೂ ರೈಲ್ವೆ ಸ್ಟೇಶನ್‌ಗೆ ಆಗಮಿಸುವ ರಸ್ತೆಗಳಲ್ಲಿ ಅನಗತ್ಯ ವಾಹನಗಳ ನಿಲುಗಡೆಯಾಗುತ್ತಿವೆ. ಅಂಗಡಿ – ಮುಂಗಟ್ಟುಗಳು ರಸ್ತೆ ಯನ್ನು ಆಕ್ರಮಿಸಿಕೊಂಡಿರುವುದರಿಂದ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿದೆ ಎಂದು ಸಭೆಯ ಗಮನಕ್ಕೆ ತಂದಾಗ ಜಿಲ್ಲಾಧಿಕಾರಿಗಳು ಸ್ಪಂದಿಸಿ,ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಅಗತ್ಯ ಕ್ರಮ ಜರುಗಿಸಲು ನಿರ್ದೇಶನ ನೀಡಿದರು.
ರಸ್ತೆ ಸುರಕ್ಷತಾ ಬಾಬತ್ತಿನಲ್ಲಿ ಬಾಕಿ ಉಳಿದಿರುವ ಅನುದಾ ನವನ್ನು ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ರಸ್ತೆಯ ಉಬ್ಬುಗಳಿಗೆ ರಿಫ್ಕೆಕ್ಟರ್‌ಗಳನ್ನು ಅಳವಡಿಸಲು ಬಳಸಬೇಕು.ಪಾಲಿಕೆಯ ಅನುದಾನವನ್ನೂ ಸಹ ಹೆಚ್ಚುವರಿಯಾಗಿ ಬಳಸಿಕೊಳ್ಳಬೇಕು ಎಂದರು. ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ 2021 ರ ಸೆಪ್ಟಂಬರ್‌ನಿಂದ ಡಿಸೆಂಬರ್ ರವರೆಗೆ ವಿವಿಧ ವರ್ಗದ ಸಾರಿಗೆ ವಾಹನಗಳಿಗೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ನೀಡಲಾದ ರಹದಾರಿಗಳಿಗೆ ಘಟನೋತ್ತರ ಅನುಮೋದ ನೆಯನ್ನು ನೀಡಲಾಯಿತು
ಪಿಂಕ್ ಆಟೋರಿಕ್ಷಾ ಪರಿಕಲ್ಪನೆಯಡಿಯಲ್ಲಿ ಮಹಿಳಾ ಆಟೋ ರಿಕ್ಷಾ ಚಾಲಕರುಗಳಿಗೆ ಉತ್ತೇಜನ ನೀಡಿ,ಮಹಿಳಾ ಸಬಲೀಕರಣಗೊಳಿಸಲು ಇನ್ನರ್‌ವೀಲ್ ಕ್ಲಬ್ ಆಫ್ ಹುಬ್ಬಳ್ಳಿ ಸಂಸ್ಥೆಯು ಮಹಿಳಾ ಆಟೋರಿಕ್ಷಾ ಚಾಲಕರಿಗೆ ಹೊಸದಾಗಿ ರಹದಾರಿ ನೀಡುವಂತೆ ಮಾಡಿಕೊಂಡಿರುವ ಮನವಿಯನ್ನು ಪ್ರಾಧಿಕಾರದಲ್ಲಿ ಪರಿಶೀಲಿಸಿ,ರಹದಾರಿ ಮಂಜೂರಾತಿಗೆ ಘಟನೋತ್ತರ ಅನುಮೋದನೆಯನ್ನು ನೀಡಲಾಯಿತು.ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಬಿ.ಗೋಪಾಲಕೃಷ್ಣ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಬಿ.ಶಂಕರಪ್ಪ,ಕೆ.ದಾಮೋದರ, ಲೋಕೋ ಪಯೋಗಿ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಬಿ. ಚೌಡಣ್ಣವರ ಸೇರಿದಂತೆ ಹಲವರು ಈ ಒಂದು ಸಭೆಯಲ್ಲಿ ಪಾಲ್ಗೊಂಡಿದ್ದರು