ಹುಬ್ಬಳ್ಳಿ –
ಚುನಾವಣೆ ನಡೆದು ಮೂರು ನಾಲ್ಕು ತಿಂಗಳು ಕಳೆದರು ಈವರೆಗೆ ನಡೆಯದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಉಪಮೇಯರ್ ಆಯ್ಕೆಗೆ ಕೊನೆಗೂ ರಾಜ್ಯ ಸರ್ಕಾರ ಚುನಾವಣೆ ಮಾಡುವಂತೆ ಆದೇಶವನ್ನು ನೀಡಿದೆ.
ಹೌದು ಮಹಾನಗರ ಪಾಲಿಕೆ ಮೇಯರ್ ಉಪಮೇಯರ್ ಮೀಸಲಾತಿ ಕುರಿತಂತೆ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೊರಡಿಸಿದೆ.ಮೇಯರ್ ಹಾಗೂ ಉಪಮೇ ಯರ್ ಎರಡು ಸ್ಥಾನಗಳು ಸಾಮಾನ್ಯವಾಗಿದ್ದು ಹು-ಧಾ ಮಹಾನಗರ ಪಾಲಿಕೆಯ ಮೇಯರ್ ಉಪಮೇಯರ್ ಸ್ಥಾನದ ಚುನಾವಣೆಯನ್ನು 21 ನೇ ಅವಧಿಗೆ ನಡೆಸುವಂತೆ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಈ ಕುರಿತಂತೆ ರಾಜ್ಯ ಸರ್ಕಾರದಿಂದ ಅಧಿಸೂಚನೆಯು ಪ್ರಕಟಗೊಂಡಿದೆ.ಮೇಯರ್ ಹಾಗೂ ಉಪಮೇಯರ್ ಎರಡೂ ಸಾಮಾನ್ಯ ಸ್ಥಾನಕ್ಕೆ ನಿಗದಿಯಾಗಿದೆ ಚುನಾವಣೆ ಈ ಹಿಂದೆ 21 ಅಥವಾ 23 ನೇ ಸ್ಥಾನಕ್ಕೆ ಚುನಾವಣೆ ನಡೆಸಬೇಕೋ ಎಂಬ ಗೊಂದಲ ಇತ್ತು ಇದೀಗ ಎರಡೂ ಸಾಮಾನ್ಯ ಸ್ಥಾನಕ್ಕೆ ನಿಗದಿಪಡಿಸಿ ಸರ್ಕಾರದಿಂದ ಅಧಿಸೂ ಚನೆ ಹೊರಬಿದ್ದಿದೆ.ಇನ್ನೂ ಇದರ ನಂತರ ಚುನಾವಣಾ ದಿನಾಂಕವನ್ನು ನಿಗದಿಪಡಿಸಲಿದ್ದಾರೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ನಂತರ ಚುನಾವಣೆ ನಡೆಯಲಿದೆ.