ಕಲಘಟಗಿ –
ಬೈಕ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಇಬ್ಬರು ಸಾವಿಗೀಡಾದ ಘಟನೆ ಧಾರವಾಡ ದ ಕಲಘಟಗಿ ಯಲ್ಲಿ ನಡೆದಿದೆ.ಹೌದು ಎರಡು ವಾಹನಗಳ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಸಾವಿಗೀಡಾದ್ದು ಗೋವಾಗೆ ತೆರಳಿದ್ದ ಇಬ್ಬರು ಸ್ಥಳದಲ್ಲೇ ದುರ್ಮರಣಕ್ಕಿಡಾ ಗಿದ್ದಾರೆ

ಹೌದು ಬೈಕ್ ಹಾಗೂ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಂಬೂರ ಕ್ರಾಸ್ ಬಳಿ ನಡೆದಿದೆ.




ನೂರ್ ಅಹ್ಮದ್, ಜಾವೀದ್ ಪಠಾಣ್ ಸಾವನ್ನಪ್ಪಿದ ದುರ್ಧೈವಿಗಳಾಗಿದ್ದಾರೆ.ಇಬ್ಬರು ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದರು. ಇಂದು ರಜೆ ಇದ್ದ ಕಾರಣ ಗೋವಾಗೆ ಪ್ರಯಾಣ ಬೆಳೆಸಿ ದ್ದರು.ಗೋವಾದಿಂದ ಮರಳಿ ಬರುವಾಗ ಘಟನೆ ಈ ಒಂದು ಘಟನೆ ನಡೆದಿದ್ದು ಸ್ಥಳಕ್ಕೆ ಕಲಘಟಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ