ಹುಬ್ಬಳ್ಳಿ –
ಹಳೆಯ ಮನೆ ತೆರವು ಕಾರ್ಯಾಚರಣೆ ವೇಳೆ ಗೋಡೆ ಕುಸಿದು ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಹುಬ್ಬಳ್ಳಿಯ ಘಂಟಿಕೇರಿಯ ಪಗಡಿ ಗಲ್ಲಿಯಲ್ಲಿ ಸಂಭವಿಸಿದೆ.ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಕಡಹಳ್ಳಿ ಗ್ರಾಮದ ಶಿವಪ್ಪ ಮುಂದಿನಮನಿ(60)ಮೃತಪಟ್ಟ ಕಾರ್ಮಿಕ ನಾಗಿದ್ದಾನೆ.

ಗುತ್ತಿಗೆದಾರ ಗಣೇಶರಾವ್ ಶಿಂಧೆ ಎಂಬುವರು ರಾಜು ಹುನಗುಂದ ಎಂಬುವರ ಹಳೆಯ ಮನೆ ಗೋಡೆ ತೆರವು ಮಾಡಿಸುತ್ತಿದ್ದರು.ಈ ವೇಳೆ ಗೋಡೆ ಶಿವಪ್ಪನ ಮೈಮೇಲೆ ಕುಸಿದು ಬಿದ್ದಿದೆ.ತೀವ್ರವಾಗಿ ಗಾಯಗೊಂಡಿದ್ದ ಶಿವಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಸ್ಥಳಕ್ಕೆ ಘಂಟಿಕೇರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.