ಧಾರವಾಡ –
ಜೆಎಸ್ ಎಸ್ ಮಹಾವಿದ್ಯಾಪೀಠದ ಧಾರವಾಡದ ಜೆಎಸ್ ಎಸ್ ವಾಕ್ ಮತ್ತು ಶ್ರವಣ ಸಂಸ್ಥೆಯ ಜಗದ್ಗುರು ಶ್ರೀಶಿವರಾತ್ರೀಶ್ವರ ವಾಕ್ ಮತ್ತು ಶ್ರವಣ ಸಂಸ್ಥೆ ಧಾರವಾಡ ಸಂಸ್ಥೆಯ ವಿದ್ಯಾರ್ಥಿ ನಿಲಯಗಳ ನೂತನ ಕಟ್ಟಡಗಳ ಭೂಮಿಪೂಜೆ ಕಾರ್ಯಕ್ರಮ ಎಪ್ರಿಲ್ 5 ರಂದು ಧಾರವಾಡ ದಲ್ಲಿ ನಡೆಯಲಿದೆ.
ಹೌದು ಈ ಕುರಿತಂತೆ ನಗರದಲ್ಲಿ ಸಂಸ್ಥೆಯ ವೈಧ್ಯಕೀಯ ಶಿಕ್ಷಣ ನಿರ್ದೇಶಕ ಮಹೇಶ್ ಆರ್ ಮಾತನಾಡಿ ಎಪ್ರಿಲ್ 5 ರಂದು ಬೆಳಿಗ್ಗೆ 11 ಗಂಟೆಗೆ ಈ ಒಂದು ಕಾರ್ಯಕ್ರಮವೂ ನಡೆಯಲಿದ್ದು ಧಾರವಾಡದ ಸುತ್ತೂರು ಮಠ ಮತ್ತು ಸಂಸ್ಥೆಯ ಆವರಣದಲ್ಲಿನ ಈ ಒಂದು ಕಾರ್ಯಕ್ರಮದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿಗಳವರ ದಿವ್ಯಸಾನಿಧ್ಯದಲ್ಲಿ ನೂತನ ಕಟ್ಟಡಗಳ ಭೂಮಿಪೂಜೆಯ ಕಾರ್ಯಕ್ರಮ ನಡೆಯಲಿದೆ ಎಂದರು
ಕಾರ್ಯಕ್ರಮದಲ್ಲಿ ಸಚಿವರು,ಸಭಾಪತಿಗಳು,ಮಾಜಿ ಸಚಿವರು,ಸಂಸದರು.ಸ್ಥಳೀಯ ಶಾಸಕರು,ಪಾಲಿಕೆಯ ಸದಸ್ಯರು ಸೇರಿದಂತೆ ಸಾಹಿತಿಗಳು ಚಿಂತಕರು ಸೇರಿದಂತೆ ಹಲವು ಗಣ್ಯರು ಈ ಒಂದು ಸಮಾರಂಭದಲ್ಲಿ ಪಾಲ್ಗೊಳ್ಳ ಲಿದ್ದು ನೂತನ ಈ ಒಂದು ವಿದ್ಯಾರ್ಥಿ ನಿಲಯದಿಂದ 150 ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಸಿಗಲಿದ್ದು ಹಾಗೇ 150 ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯ ಸಿಗಲಿದ್ದು ಸುಸಜ್ಜಿ ತವಾಗಿ ಮೂಲಭೂತ ಸೌಲಭ್ಯಗಳೊಂದಿಗೆ 26 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ವಿದ್ಯಾರ್ಥಿ ನಿಲಯಗಳು ಹಾಗೇ ಪೋಷಕರು ಮತ್ತು ಅತಿಥಿಗಳ ವಾಸ್ತವ್ಯಕ್ಕೆ ಅನು ಕೂಲ ಕಲ್ಪಿಸಲಾಗಿದೆ ಎಂದು ಮಹೇಶ್ ಅವರು ಹೇಳಿ ದರು.ಇನ್ನೂ ಈ ಒಂದು ಸಮಯದಲ್ಲಿ ಸಂಸ್ಥೆಯ ಸಹಾಯಕ ಆಡಳಿತ ಅಧಿಕಾರಿಗಳಾದ ಎಂ.ಮಹೇಂದ್ರ ಪಟೇಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪರಶುರಾಮ ಗೌಡರ ಜೊತೆ ಮಂಜುನಾಥ ಸರ್ವಿ ಸುದ್ದಿ ಸಂತೆ ನ್ಯೂಸ್ ಧಾರವಾಡ