ಧಾರವಾಡ –
ದೇಶದ ಪ್ರತಿಯೊಂದು ಗ್ರಾಮದ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸಲು 3 ಲಕ್ಷ 44 ಸಾವಿರ ರೂ.ಗಳ ವೆಚ್ಚದಲ್ಲಿ ಜಲ ಜೀವನ ಮಿಷನ್ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.ಜಲಧಾರೆ ಯೋಜನೆಯಡಿ ನದಿ ಮೂಲದ ನೀರನ್ನು ಎಲ್ಲಾ ಹಳ್ಳಿಗಳಿಗೆ ಪೂರೈಸಲಾಗು ವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ ಜೋಶಿ ಹೇಳಿದರು.

ಹೆಬ್ಬಳ್ಳಿ ಗ್ರಾಮದಲ್ಲಿಂದು ಸಂಜೆ 20 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುತ್ತಿರುವ ಹೆಬ್ಬಳ್ಳಿ-ಮೊರಬ-ಬ್ಯಾಹಟ್ಟಿ ರಸ್ತೆ ಹಾಗೂ ಜಲ ಜೀವನ್ ಮಿಷನ್ ಯೋಜನೆಯಡಿ 4 ಕೋಟಿ ರೂ ವೆಚ್ಚದಲ್ಲಿ ಮನೆ ಮನೆಗೆ ನಳ ಸಂಪರ್ಕ ಕಲ್ಪಿಸುವ ಕಾಮಗಾ ರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಭಾರತ ಸರ್ಕಾರ,ರಾಜ್ಯ ಸರ್ಕಾರಗಳು ಹಾಗೂ ಹೊರ ಅನುದಾನ,ನೆರವಿನಿಂದ ಜಲ ಜೀವನ ಮಿಷನ್ ಅಡಿ ಮನೆ ಮನೆಗೆ ನಳ ಸಂಪರ್ಕ ಕಲ್ಪಿಸಲಾಗುತ್ತಿದೆ.ಜಲಧಾರೆ ಯೋಜನೆಯಡಿ ಮಲಪ್ರಭಾ ನದಿಮೂಲದ ನೀರನ್ನು ಜಿಲ್ಲೆಯ ಪ್ರತಿ ಗ್ರಾಮಗಳಿಗೂ ಪೂರೈಸಲು ಸುಮಾರು 1100 ಕೋಟಿ ರೂ.ವೆಚ್ಚದ ಯೋಜನೆಯನ್ನು ಕೈಗೆತ್ತಿಕೊ ಳ್ಳಲಾಗಿದೆ ಎಂದರು.


ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ,ಧಾರವಾಡ ಶಾಸಕ ಅಮೃತ ದೇಸಾಯಿ,ಹೆಬ್ಬಳ್ಳಿ ಗ್ರಾ.ಪಂ.ಅಧ್ಯಕ್ಷೆ ತೇಜಸ್ವಿನಿ ತಲವಾಯಿ,ಉಪಾಧ್ಯಕ್ಷ ವಿಠ್ಠಲ ಇಂಗಳೆ,ಜಿಪಂ ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಕಾರ್ಯನಿ ರ್ವಾಹಕ ಇಂಜಿನಿಯರ್ ರಾಜಶೇಖರ ಮುನವಳ್ಳಿ, ಪಂಚಾ ಯತ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾ ಹಕ ಇಂಜಿನಿಯರ್ ಬಿ.ಎಸ್.ಗೌಡರ್ ಮತ್ತಿತರರು ಇದ್ದರು