ಹುಬ್ಬಳ್ಳಿ –
ಧಾರವಾಡದ ಬಾಡ ಕ್ರಾಸ್ ನಲ್ಲಿ ನಡೆದ ಭೀಕರ ಅಪಘಾತ ಪ್ರಕರಣ ಕುರಿತು ಗಾಯಗೊಂಡಿದ್ದ 13 ಜನರನ್ನು ಹುಬ್ಬಳ್ಳಿ ಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಕಾರ್ಯ ಕ್ರಮವೊಂದಕ್ಕೆ ಹೋಗಿ ಮರಳಿ ಹೊರಟಿದ್ದ ಸಮಯದಲ್ಲಿ ನಿಯಂತ್ರಣ ವನ್ನು ಕಳೆದುಕೊಂಡ ಕ್ರೂಜರ್ ವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲೇ ಏಳು ಜನರು ಮೃತರಾಗಿದ್ದು ಇನ್ನೂ ಘಟನೆ ಯಲ್ಲಿ 13 ಜನರು ತೀವ್ರವಾಗಿ ಗಾಯಗೊಂಡಿದ್ದು ಧಾರವಾಡದ ಜಿಲ್ಲಾ ಆಸ್ಪತ್ರೆ ಯಲ್ಲಿ ಪ್ರಥಮ ಚಿಕಿತ್ಸೆ ಯನ್ನು ನೀಡಿ ಹೆಚ್ಚಿನ ಚಿಕಿತ್ಸೆ ಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ
ಹೌದು ಹುಬ್ಬಳ್ಳಿಯ ಕಿಮ್ಸ್ ಗೆ ಗಾಯಗೊಂಡವರನ್ನು ಸಧ್ಯ ಚಿಕಿತ್ಸೆ ಗಾಗಿ ದಾಖಲಿಸಲಾಗಿದೆ.21 ಜನ ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನದಲ್ಲಿ ಈ ಪೈಕಿ ಮಕ್ಕಳು ಸೇರಿ 13 ಜನ ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಯನ್ನು ನೀಡಲಾ ಗುತ್ತಿದೆ.
ಇನ್ನೂ ಈಗಾಗಲೇ ಅಪಘಾತ ನಡೆದ ಸ್ಥಳದಲ್ಲೇ ಏಳು ಜನರು ಸಾವಿಗೀಡಾಗಿದ್ದು ಗಂಭೀರವಾಗಿ ಗಾಯಗೊಂಡ ವರಿಗೆ ಪ್ರಥಮ ಚಿಕಿತ್ಸೆ ಯನ್ನು ನೀಡಿ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲು ಮಾಡಲಾಗಿದೆ
ಈ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ.ಈಗಾಗಲೇ ಈ ಒಂದು ಸುದ್ದಿ ತಿಳಿದು ಧಾರವಾಡ ಎಸ್ಪಿ ಡಿವೈ ಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಇದೇ ವೇಳೆ ಘಟನೆ ಕುರಿತು ಧಾರವಾಡ ಎಸ್ಪಿ ಮಾತನಾಡಿ ಮಾಹಿತಿ ಯನ್ನು ನೀಡಿದರು.
ಗಂಭೀರ ಗಾಯಗೊಂಡವರಿಗೆ ಕಿಮ್ಸ್ ನಲ್ಲಿ ಮುಂದುವರೆದ ಚಿಕಿತ್ಸೆ.ಇತ್ತ ಧಾರವಾಡ ಗ್ರಾಮೀಣ ಪೊಲೀಸರು ಪ್ರಕರಣ ಕುರಿತು ತನಿಖೆ ಯನ್ನು ಮಾಡತಾ ಇದ್ದಾರೆ.