ಬೆಂಗಳೂರು
ಸರ್ಕಾರದ ಆದೇಶದಂತೆ ಗ್ರಾಮ ಒನ್ ಕೇಂದ್ರಗಳಲ್ಲಿ ವಿವಿಧ ಇಲಾಖೆಗಳ ಒಟ್ಟು 768 ಸೇವೆಗಳನ್ನು ಈಗಾಗಲೇ ನೀಡಲಾಗುತ್ತಿದೆ.ಅದರಂತೆ ವಿದ್ಯಾರ್ಥಿಗಳಿಗೆ KSRTC ಬಸ್ ಪಾಸ್ ಸೌಲಭ್ಯವನ್ನು ಪಡೆಯಲು ಗ್ರಾಮ ಒನ್ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.ಬಸ್ ಪಾಸ್ ಅಪೇಕ್ಷಿಸುವ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆಯಲು ಕೋರಿದೆ.

ವಿದ್ಯಾರ್ಥಿಗೆ ಬಸ್ ಪಾಸ್‍ಗೆ ಅಗತ್ಯ ದಾಖಲೆ ಶೈಕ್ಷಣಿಕ ಸಂಸ್ಥೆ ಕೆ ಎಸ್ ಆರ್ ಟಿಸಿ ಬಸ್ ಪಾಸ್‍ನಿಂದ ಘೋಷಣೆ ಪ್ರಮಾಣಪತ್ರ,ಆಧಾರ್ ಕಾರ್ಡ್,ಶುಲ್ಕ ಪಾವತಿಸಿದ ರಸೀದಿ ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ,ಎಸ್‍ಸಿ ಎಸ್‍ಟಿ ಪ್ರಮಾಣ ಪತ್ರ(ಅನ್ವಯಿಸಿದರೆ) ಈ ದಾಖಲೆಗಳೊಂದಿಗೆ ಗ್ರಾಮ ಒನ್ ಕೇಂದ್ರಗಳಿಗೆ ತೆರಳಿ ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದೆ.






















