ಧಾರವಾಡ –
ಹೌದು ಕಳೆದ 30 ವರ್ಷಗಳಿಂದ ಹಗಲಿರುಳು ಎನ್ನದೇ ರಾಜ್ಯದ ಶಿಕ್ಷಕರ ಸರ್ಕಾರಿ ನೌಕರರ ಸೇವೆ ಮಾಡಿರುವ ಬಸವರಾಜ ಗುರಿಕಾರ ಈ ಬಾರಿ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ಕೈ ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದಾರೆ ಈವರೆಗೆ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಕ್ಷೇತ್ರದಲ್ಲಿ ಸೇವೆಯನ್ನು ಮಾಡಿ ತಮ್ಮನ್ನು ತಾವು ಗುರುತಿಸಿ ಕೊಂಡಿ ರುವ ಬಸವರಾಜ ಗುರಿಕಾರ ಈ ಬಾರಿ ಗುರಿ ಮುಟ್ಟಿ ಗೆದ್ದು ಹೊಸ ದಾಖಲೆ ಬರೆಯಲು ಮುಂದಾಗಿದ್ದಾರೆ
ಹಿಂದಿನ ಚುನಾವಣೆಗಳಲ್ಲಿನ ಎಲ್ಲವೂಗಳನ್ನು ಮುಂದಿಟ್ಟು ಕೊಂಡು ಗೆಲುವಿನ ಚಿತ್ರಣವನ್ನು ಬದಲಾವಣೆ ಮಾಡಲು ಈ ಬಾರಿ ಮುಂದಾಗಿ ಯೋಜನೆ ಹಾಕಿಕೊಂಡು ಆ ಒಂದು ನಿಟ್ಟಿನಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ ಹೀಗಾಗಿ ಚುನಾವಣೆ ಘೋಷಣೆ ಮತ್ತು ಅಭ್ಯರ್ಥಿ ಘೋಷಣೆ ಮುನ್ನವೇ ಕೆಲಸ ದಲ್ಲಿ ತೊಡಗಿಕೊಂಡಿದ್ದಾರೆ
ಪ್ರತಿ ಚುನಾವಣೆ ಗಿಂತ ಈ ಬಾರಿ ಚುನಾವಣೆ ಯನ್ನು ಹಗುರವಾಗಿ ಪರಿಗಣಿಸುವಂತಿಲ್ಲ ಮತದಾರರು ಕೂಡಾ ಬದಲಾವಣೆ ಬಯಸಿದ್ದು ಈ ಬಾರಿ ಅಷ್ಟು ಹಗುರವಾಗಿ ಪರಿಗಣಿಸುವಂತಿಲ್ಲ.ಕೊನೇ ಕ್ಷಣದಲ್ಲಿ ಅಭ್ಯರ್ಥಿ ಹೆಸರು ಘೊಷಿಸುತ್ತಿದ್ದ ಕಾಂಗ್ರೆಸ್ ಆರು ತಿಂಗಳಿಗೂ ಮುನ್ನವೇ ಬಸವರಾಜ ಗುರಿಕಾರ ಹೆಸರನ್ನು ಅಖೈರುಗೊಳಿಸಿತ್ತು. ಕ್ಷೇತ್ರದಲ್ಲಿ ಓಡಾಡಿಕೊಂಡು ಪ್ರಚಾರ ಮಾಡಲು ಗುರಿಕಾರ ಅವರಿಗೆ ಸಾಕಷ್ಟು ಸಮಯಾವಕಾಶ ಸಿಕ್ಕಿದೆ.ಗುರಿಕಾರ ಕೂಡ ಕಳೆದ ಮೂರು ದಶಕಗಳಿಂದ ಶಿಕ್ಷಕರ ಸಂಘಟನೆ ಯಲ್ಲಿ ಗುರುತಿಸಿ ಕೊಂಡವರು.
ಹೊರಟ್ಟಿ ಅವರಿಗೆ ಸಮಬಲದ ಪೈಪೋಟಿ ನೀಡುವಷ್ಟು ಸಮರ್ಥರೂ ಆಗಿದ್ದಾರೆ.ಈಗಾಗಲೇ ಶಿಕ್ಷಕರಿಂದಲೂ ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಬೆಂಬಲ ಉತ್ಸಾಹ ಕಂಡು ಬರುತ್ತಿದ್ದು ಈ ಕಾರಣಕ್ಕಾಗಿಯೇ ಹೊರಟ್ಟಿ ಅವರ ವಿರುದ್ದ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಕಾಲಿಗೆ ಚಕ್ರಕಟ್ಟಿಕೊಂಡು ಓಡಾಡುತ್ತಿದ್ದಾರೆ. ಈ ಮಧ್ಯೆ ಗುರಿಕಾರ ಮೂರು ಸುತ್ತಿನ ಪ್ರಚಾರ ನಡೆಸಿದ್ದು ಈ ಬಾರಿ ಎಲ್ಲ ದಾಖಲೆ ಅಳಿಸಿ ಹಾಕುತ್ತೇವೆ ಎನ್ನುವ ವಿಶ್ವಾಸ ದೊಂದಿಗೆ ಗೆಲುವು ಸಾಧಿಸಿ ಹೊಸ ದಾಖಲೆ ಬರೆಯ ಲಿದ್ದಾರೆ
ಧಾರವಾಡ,ಗದಗ,ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆ ಗಳು ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತವೆ. ಪಕ್ಷೇತರರಾಗಿ, ಜನತಾ ಪಕ್ಷ, ಲೋಕಶಕ್ತಿ, ನವ ನಿರ್ಮಾಣ ವೇದಿಕೆಯಿಂದ ತಲಾ ಒಂದು ಬಾರಿ ಹಾಗೂ ಜೆಡಿ ಎಸ್ ನಿಂದ 3 ಬಾರಿ ಹೊರಟ್ಟಿ ಗೆದ್ದಿದ್ದಾರೆ.42 ವರ್ಷಗಳಲ್ಲಿ ಕ್ಷೇತ್ರ ಪ್ರತಿನಿಧಿಸಿರುವ ಹೊರಟ್ಟಿ ಅವರ ಗೆಲುವಿನ ಓಟಕ್ಕೆ ಗುರಿಕಾರ ಅವರು ಈ ಬಾರಿ ಬ್ರೇಕ್ ಹಾಕಲು ಕೆಲಸ ಕಾರ್ಯ ಗಳನ್ನು ಮಾಡುತ್ತಿದ್ದಾರೆ.ಅಲ್ಲದೇ ಕಾಂಗ್ರೆಸ್ ಅಭ್ಯರ್ಥಿ ಗೆ ಹಲವರ ಈಗಾಗಲೇ ಸಿಕ್ಕಿದ್ದು ಬೆಂಬಲಿತರು ಕೈ ಅಭ್ಯರ್ಥಿ ಗೆಲ್ಲಿಸಿ ದಾಖಲೆಯ ಪುಟ ಸೇರಿಸಲು ಮುಂದಾಗಿದ್ದಾರೆ