ಬೆಳಗಾವಿ –
ವಿಧಾನ ಪರಿಷತ್ ನ ಪಶ್ಚಿಮ ಶಿಕ್ಷಕರ ಮತಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ ಎಂದೇ ಕರೆಯಿಸಿಕೊಳ್ಳುತ್ತಿರುವ ಬಸವರಾಜ ಹೊರಟ್ಟಿ 8ನೇ ಬಾರಿಗೆ ಗೆದ್ದು ಇತಿಹಾಸವನ್ನು ನಿರ್ಮಾಣ ಮಾಡಿದ್ದಾರೆ.ಹೌದು ಕಳೆದ 7 ಬಾರಿ ಕ್ಷೇತ್ರದಲ್ಲಿ ಗೆಲುವನ್ನು ಸಾಧಿಸುತ್ತಾ ಬಂದಿರುವ ಬಸವರಾಜ ಹೊರಟ್ಟಿ ಮತ್ತೊಮ್ಮೆ 8ನೇ ಬಾರಿಗೆ ಗೆಲುವು ಸಾಧಿಸಿ ಐತಿಹಾಸಿಕ ಸಾಧನೆಯನ್ನು ಮಾಡಿದ್ದಾರೆ.
ಹೌದು ಇಂದು ಬೆಳಗಾವಿಯಲ್ಲಿ ನಡೆದ ಮತ ಏಣಿಕಯಲ್ಲಿ ವಿಧಾನ ಪರಿಷತ್ನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಗೆಲುವು ಸಾಧಿಸಿದ್ದಾರೆ.ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ದಾಖಲೆಯ ಗೆಲವನ್ನು ಸಾಧಿಸಿದ್ದು 15583 ಮತಗಳು ಚಲಾವಣೆಯಾಗಿದ್ದು ಇದರಲ್ಲಿ ಬಸವರಾಜ ಹೊರಟ್ಟಿ 9266 ಮತ ಪಡೆದಿದ್ದು ಇನ್ನೂ ಕಾಂಗ್ರೇಸ್ ಪಕ್ಷದ ಬಸವ ರಾಜ ಗುರಿಕಾರ 4597 ಮತಗಳನ್ನು ಪಡೆದಿದ್ದು ಜೆಡಿಎಸ್ ಪಕ್ಷದ ಶ್ರೀಶೈಲ ಗುಡದಿನ್ನಿ 273 ಮತಗಳನ್ನು ಪಡೆದಿದ್ದಾರೆ ಇನ್ನೂ ಇದರಲ್ಲಿ ಸಿಂಧು ಮತಗಳು- 14,360 ಮತಗಳು ತಿರಸ್ಕೃತ ಮತಗಳು- 1223 ಮತಗಳಾಗಿವೆ.9266 ಮತಗ ಳನ್ನು ಪಡೆಯುವ ಮೂಲಕ ಮೊದಲ ಪ್ರಾಶಸ್ತ್ಯದಲ್ಲೇ ಗೆಲುವಿನ ನಗೆ ಬೀರಿದ್ದಾರೆ ಬಸವರಾಜ ಹೊರಟ್ಟಿ ಯವರು ಇದೇ ವೇಳೆ ಮಾತನಾಡಿದ ಅವರು ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ 8ನೇ ಬಾರಿಗೆ ಗೆಲ್ಲುವ ಮೂಲಕ ದೇಶದ ರಾಜಕೀಯ ಇತಿಹಾಸದಲ್ಲಿಯೇ ದಾಖಲೆ ನಿರ್ಮಿಸಿದ್ದೇನೆ ಎಂದರು.
ಬೆಳಗಾವಿ ನಗರದ ಜ್ಯೋತಿ ಪಿಯು ಕಾಲೇಜಿನಲ್ಲಿ ಸುದ್ದಿಗಾ ರರೊಂದಿಗೆ ಮಾತನಾಡಿದ ಹೊರಟ್ಟಿ 1890ರಿಂದ 2022 ರವರೆಗೆ ನಿರಂತರವಾಗಿ ಗೆಲುವು ಸಾಧಿಸಿದ್ದೇನೆ. ರಾಜಕೀ ಯದಲ್ಲಿ ಇತಿಹಾಸದಲ್ಲಿ ಸತತವಾಗಿ 8 ಬಾರಿ ಗೆದ್ದಿಲ್ಲ.ಈ ಗೆಲುವು ಶಿಕ್ಷಕರದ್ದು ಎಂದರು.ಈ ಬಾರಿ ಚುನಾವಣೆಯಲ್ಲಿ 8 ರಿಂದ 10 ಸಾವಿರ ಮತಗಳ ಬರುವ ನಿರೀಕ್ಷೆಯಿಟ್ಟುಕೊ ಳ್ಳಲಾಗಿತ್ತು.ಇದೀಗ 9 ಸಾವಿರ ಮತ ಪಡೆಯುವ ಮೂಲಕ ಗೆಲುವು ಸಾಧಿಸಿದ್ದೇನೆ.ಚುನಾವಣೆಯಲ್ಲಿ ಚಲಾಯಿಸಿದ ಮತಗಳಲ್ಲಿ ಶೇ.50 ಮತ ಪಡೆದುಕೊಂಡವರು ಗೆಲುವು ಸಾಧಿಸಲಿದ್ದಾರೆ.ಇನ್ನೂ ಸಭಾಪತಿ ಸ್ಥಾನದ ಫೋಟೋ ಬಳಕೆ ಬಗ್ಗೆ ನೋಟಿಸ್ ಬಂದಿದೆ.ಈ ಬಗ್ಗೆ ಕಾನೂನು ಹೋರಾಟ ನಡೆಯಲಿದೆ. ಸಚಿವನಾಗುತ್ತೇನೆ. ಸಭಾಪತಿ ಆಗುತ್ತೇನೋ ಗೊತ್ತಿಲ್ಲ.ಪಕ್ಷದಿಂದ ಯಾವುದೇ ಭರವಸೆ ಸಿಕ್ಕಿಲ್ಲ.ನಮ್ಮ ಅಭಿಲಾಷೆ ದೇವರು ಈಡೇರಿಸಬೇಕು
ಸಚಿವನಾಗೋ ಬಗ್ಗೆ ಮಾರ್ಮಿಕವಾಗಿ ಮಾತುಗಳನ್ನು ಹೇಳಿದರು.