ಧಾರವಾಡ –
ಜನನಿ ಪ್ರತಿಷ್ಠಾನ ಧಾರವಾಡ ಸಾಮಾಜಿಕ ಅರಣ್ಯ ಇಲಾಖೆ ಧಾರವಾಡ ಹಾಗೂ ಗ್ರಾಮ ಪಂಚಾಯತ ಮಾದನಬಾವಿ ಇವರ ಸಂಯುಕ್ತ ಆಶ್ರಯದಲ್ಲಿ ಮಾದನಬಾವಿ ಗ್ರಾಮದಲ್ಲಿ ವೃಕ್ಷಾರೋಪಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮಕ್ಕೆ ಧಾರವಾಡ ಗ್ರಾಮೀಣ ಶಾಸಕರಾದ ಅಮೃತ ದೇಸಾಯಿ ಇವರು ಆಗಮಿಸಿ ಸಸಿಗಳನ್ನು ನೆಟ್ಟು ಮಾತನಾಡಿ ಗೀಡಮರಗಳನ್ನು ಬೆಳಸಿ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿ ಜನನಿ ಪ್ರತಿಷ್ಠಾನದ ಕಾರ್ಯವನ್ನು ಶ್ಲಾಘಿಸಿದರು
ಕಾರ್ಯಕ್ರಮದ ಆಯೋಜಕರಾದ ಅಶ್ವಿನ್ ಭೂಸಾರೆ ಮಾತನಾಡಿ ಜನನಿ ಪ್ರತಿಷ್ಠಾನವು ಪ್ರತಿ ವರ್ಷ ಸರ್ಕಾರದ ಗೋಮಾಳಗಳನ್ನು ಗುರುತಿಸಿ ಅಲ್ಲಿ ಸಾವಿರಾರು ಸಸಿಗ ಳನ್ನು ನೆಟ್ಟು ಅವುಗಳ ಪಾಲನೆ ಪೋಷಣೆಯನ್ನು ಅರಣ್ಯ ಇಲಾಖೆಯ ಸಹಕಾರದಿಂದ ಮಾಡಲಾಗುತ್ತಿದೆ ಈಗಾಗಲೇ 800 ಸಸಿಗಳನ್ನು ನೆಡಲಾಗಿದೆ ಧಾರವಾಡ ತಾಲೂಕಿನ ಹೆಬ್ಬಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿಉಚಿತ ಟ್ಯೂಶನ್ ಕಲಿಕಾ ಕೇಂದ್ರಗಳನ್ನು ತೆರೆದು ಅದರ ಮೂಲಕ ಮಕ್ಕಳಿಗೆ ಶಿಕ್ಷಕರು ನೀಡಿದ ಮನೆ ಪಾಠವನ್ನು ಅಚ್ಚುಕಟ್ಟಾಗಿ ನಮ್ಮ ಪ್ರೇರಕರಿಂದ ಮಾಡಿಸಲಾಗುತ್ತಿದೆ ಎಂದರು
ಕಾರ್ಯಕ್ರಮದ ಉಸ್ತುವಾರಿ ಪ್ರೋ. ಸುರೇಶ ಅರಕೇರಾ, ಧಾರವಾಡ ಉಪವಿಭಾಗ ಅಧಿಕಾರಿ ಅಶೋಕ ತೆಲಿ, ಕೆ.ಎ.ಎಸ್ ಅಧಿಕಾರಿ ಸಂತೋಷ ಬಿರಾದಾರ, ಮಾದನ ಬಾವಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪಂಚಾಯತ ಸದಸ್ಯರು,ಹಿರಿಯರು,ಅರಣ್ಯ ಇಲಾಖೆ,ಎಚ್.ಡಿ.ಎಪ್.ಡಿ ಬ್ಯಾಂಕ್ ಸಿಬ್ಬಂದಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು,ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ – ಎಲ್ ಐ ಲಕ್ಕಮ್ಮನವರ ಶಿಕ್ಷಕರು