ಬೆಂಗಳೂರು –
ಮಹಾನಗರ ಪಾಲಿಕೆಗೆ ಚುನಾವಣೆ ನಡೆಸುವ ಸಂಬಂಧ ಹೈಕೋರ್ಟ್ನಲ್ಲಿ ವಿಚಾರಣೆ ಅಂತಿಮವಾಗಿದೆ. ಬೆಂಗಳೂರಿನ ಹೈಕೊರ್ಟ್ ನಲ್ಲಿ ಈಗಾಗಲೇ ನಡೆದ ವಿಚಾರಣೆಯಲ್ಲಿ ರಾಜ್ಯ ಸರ್ಕಾರ ,ಚುನಾವಣಾ ಆಯೋಗ,ಅರ್ಜಿದಾರರು ಹೀಗೆ ಮೂವರ ಪರವಾಗಿ ನ್ಯಾಯವಾದಿಗಳಿಂದ ನ್ಯಾಯಾಧೀಶರು ವಾದ ಪ್ರತಿವಾದವನ್ನು ಆಲಿಸಿದ್ರು. ಈ ಹಿಂದೆ ಅಂದರೆ ಶುಕ್ರವಾರ ವಿಚಾರಣೆ ಮಾಡಿದ ವಿಭಾಗೀಯ ಪೀಠದ ನ್ಯಾಯಾಧೀಶರು ಇಂದು ಸಂಜೆ ಆದೇಶವನ್ನು ಪ್ರಕಟಿಸಲಿದ್ದಾರೆ.
ಈಗಾಗಲೇ ವಿಭಾಗೀಯ ಪೀಠದಲ್ಲಿ ವಿಚಾರಣೆ ಮಾಡಿದ ನ್ಯಾಯಮೂರ್ತಿಗಳು ಮತ್ತೆ ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರದ ಪರ ವಕೀಲರಿಂದ ವಾದವನ್ನು ಆಲಿಸಿದ್ರು. ಅರ್ಜಿಯನ್ನು ವಿಚಾರಣೆಗೆ ಮುಂದೂಡಿದ್ದರು. ಮತ್ತೆ ಅರ್ಜಿಯನ್ನು ವಿಚಾರಣೆ ಮಾಡಿ ವಿಭಾಗೀಯ ಪೀಠದ ನ್ಯಾಯಮೂರ್ತಿಗಳು ವಾದ ಪ್ರತಿವಾದವನ್ನು ಆಲಿಸಿ ಇವತ್ತು ಆದೇಶವನ್ನು ಕಾಯ್ದಿರಿಸಿದ್ರು. ಈಗಾಗಲೇ ವಾದ ಪ್ರತಿವಾದವನ್ನು ಆಲಿಸಿರುವ ನ್ಯಾಯಮೂರ್ತಿಗಳು ಬಹುತೇಕವಾಗಿ ಇಂದೇ ಸಂಜೆ ಅಂತಿಮ ತೀರ್ಪನ್ನು ಪ್ರಕಟಿಸಲಿದ್ದಾರೆ .
ಇಂದು ನ್ಯಾಯಮೂರ್ತಿಗಳು ಈ ಒಂದು ಆದೇಶವನ್ನು ಸಂಜೆ ನಾಲ್ಕು ಘಂಟೆಗೆ ಆದೇಶವನ್ನು ನೀಡಲಿದ್ದಾರೆ. ಚುನಾವಣಾ ಆಯೋಗದ ಪರವಾಗಿ ಹಾಜರಾದ ನ್ಯಾಯವಾದಿಗಳು 82 ವಾರ್ಡ ಗಳಿಗೆ ಚುನಾವಣೆ ಮಾಡೋಣಾ,ಬೇರೆ ಮಾಡೋದಾದ್ರೆ ಮತ್ತೆ ಮೀಸಲಾತಿ ಮಾಡಿದರೆ ತುಂಬಾ ತಡವಾಗುತ್ತದೆ ಅಲ್ಲದೇ ಇದರೊಂದಿಗೆ ಮತ್ತೊಂದು ಸಮಸ್ಯೆಯಾಗುತ್ತದೆ ಎಂದಿದ್ದಾರೆ. ಅಲ್ಲದೇ ಈಗಾಗಲೇ ತಡವಾಗಿದ್ದು ಮತ್ತೆ ವಿಳಂಬವಾಗುತ್ತದೆ ಎಂದು ಹೇಳಿದರು. ಇನ್ನೂ ರಾಜ್ಯ ಸರ್ಕಾರದ ಪರವಾಗಿ ಎಜಿ ಫಣೀಂದ್ರ ಅವರು ಹಾಜರಾಗಿದ್ದರು.ಇನ್ನೂ ಇತ್ತ ಚುನಾವಣೆ ವಿಳಂಬ ಕುರಿತಂತೆ ಹುಬ್ಬಳ್ಳಿಯ ಕಾಂಗ್ರೇಸ್ ಪಕ್ಷದ ಮುಖಂಡ ನಾಗರಾಜ ಗೌರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇವರ ಪರವಾಗಿ ಎಸ್ ಪಿ ಶಂಕರ್ ನ್ಯಾಯವಾದಿಗಳು ಹಾಜರಾಗಿ ವಾದವನ್ನು ಮಂಡಿಸಿದ್ರು.ಒಟ್ಟಾರೆ ಈಗಾಗಲೇ ಮೂವರು ನ್ಯಾಯವಾದಿಗಳಿಂದ ವಾದ ಪ್ರತಿವಾದವನ್ನು ಆಲಿಸಿರುವ ವಿಭಾಗೀಯ ಪೀಠದ ನ್ಯಾಯಮೂರ್ತಿಗಳು ಇಂದು ಚುನಾವಣೆ ಮಾಡುವ ಕುರಿತಂತೆ ಗ್ರೀನ್ ಸಿಗ್ನಲ್ ಅಂತಿಮ ತೀರ್ಪನ್ನು ಸಂಜೆ ಪ್ರಕಟ ಮಾಡಲಿದ್ದಾರೆ.ಇನ್ನೂ ನ್ಯಾಯಾಲಯದ ಆದೇಶದ ಯಾವಾಗ ಎನ್ನುತ್ತಾ ಹುಬ್ಬಳ್ಳಿ ಧಾರವಾಡ ಜನತೆ ಕುತೂಹಲದಿಂದ ಕಾಯತಾ ಇದ್ದಾರೆ.