ಹುಬ್ಬಳ್ಳಿ –
ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 1:00ಗಂಟೆಗೆ ಇಲ್ಲಿನ ಸುಳ್ಳ ರಸ್ತೆಯಲ್ಲಿ ಇರುವ ಹೊಲದಲ್ಲಿ ನಡೆಸಲು ಕುಟುಂಬಸ್ಥರು ನಿರ್ಧರಿಸಿ ದ್ದಾರೆ.ಸುಳ್ಳ ರಸ್ತೆಯಲ್ಲಿನ ಗುರೂಜಿ ಅವರಿಗೆ ಸೇರಿದ ಹೊಲದಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬದವರು ತೀರ್ಮಾನಿಸಲಾಗಿದ್ದು ಪಾರ್ಥೀವ ಶರೀರವನ್ನು ಇಂದು ಬೆಳಿಗ್ಗೆ 10 ಗಂಟೆಗೆ ಅಂತಿಮ ದರ್ಶನಕ್ಕೆ ಇರಿಸಲಾಗುತ್ತದೆ
ಇನ್ನೂ ಅಣ್ಣನ ಮಗ ಮುಂಬಯಿನಲ್ಲಿ ಗುರೂಜಿ ಕಚೇರಿ ಯಲ್ಲೇ ನೌಕರಿಯಲ್ಲಿದ್ದು ಅವರ ಅಣ್ಣನ ಪುತ್ರ ಮೃತಪಟ್ಟಿ ದ್ದರಿಂದ ಪಾರ್ಥಿವ ಶರೀರದೊಂದಿಗೆ ಗುರೂಜಿ ಹುಬ್ಬಳ್ಳಿಗೆ ಬಂದಿದ್ದರು.ಒಂದು ತಿಂಗಳ ಹಿಂದೆಯಷ್ಟೆ ಮನೆಗೆ ಆಗಮಿಸಿ ಉಪಹಾರ ಸೇವಿಸಿ ಹೋಗಿದ್ದು ಎರಡು ದಿನಗಳ ಹಿಂದೆ ಸಂಜೆಯಷ್ಟೇ ಮೊಬೈಲ್ ನಲ್ಲಿ ನನ್ನೊಂದಿಗೆ ಮಾತ ನಾಡಿದ್ದರು.ಮಂಗಳವಾರ ಭೇಟಿಯಾಗೋಣ ಎಂದಿದ್ದರು ಎಂದು ತಿಳಿಸಿದರು ಎಂಬ ಮಾತನ್ನು ಹೇಳಿದ್ದಾರೆ
ಗುರೂಜಿ ಮಗಳು ಹಾಗೂ ಪತ್ನಿ ಮುಂಬಯಿನಲ್ಲಿದ್ದು ಇಬ್ಬರು ಅಕ್ಕಂದಿರರಲ್ಲಿ ಒಬ್ಬರು ವಿಜಯಪುರ, ಇನ್ನೊ ಬ್ಬರು ಶಿಕಾರಿಪುರದಲ್ಲಿದ್ದಾರೆ ಎಂದು ತಿಳಿದುಬಂದಿದ್ದು ಇವರೆಲ್ಲರೂ ಈಗಾಗಲೇ ಆಗಮಿಸಿದ್ದು ಬೆಳಿಗ್ಗೆ 10 ಗಂಟೆಗೆ ಸಾರ್ವಜನಿಕರ ದರ್ಶನದ ನಂತರ ಅವರ ಸ್ವತಃ ಜಮೀನಿ ನಲ್ಲಿಯೇ ವಿಧಿ ವಿಧಾನದ ಮೂಲಕ ಅಂತ್ಯ ಸಂಸ್ಕಾರ ನಡೆಯಲಿದೆ.

























