ಧಾರವಾಡ –
ರಾಸಾಯನಿಕ ಹೊತ್ತ ಟ್ಯಾಂಕರ್ ವೊಂದು ಅಪಘಾತ ಕ್ಕಿಡಾದ ಘಟನೆ ಧಾರವಾಡ ದಲ್ಲಿ ನಡೆದಿದೆ.ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಬಿದ್ದಿದೆ ರಸಾಯನಿಕ ಹೊತ್ತ ಟ್ಯಾಂಕರ್ ವೊಂದು.
ಧಾರವಾಡ ಹೊರಹೊಲಯದ ಮಮ್ಮಿಗಟ್ಟಿ ಬಳಿ ಈ ಒಂದು ಘಟನೆ ನಡೆದಿದೆ.ಘಟನೆ ನಂತರ ಸ್ಥಳಕ್ಕೆ ಗರಗ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಟ್ಯಾಂಕರ್ ಬಳಿ ಯಾರನ್ನು ಬಿಡದೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಯಿತು.ಟ್ಯಾಂಕರ್ ನಲ್ಲಿದ್ದ ಚಾಲಕ ನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.