ಹುಬ್ಭಳ್ಳಿ –
ಹುಬ್ಬಳ್ಳಿ ಧಾರವಾಡ ಸಿಸಿಬಿ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರ ಅವರಿಗೆ ಹೆಚ್ಚುವರಿಯಾಗಿ ಹುಬ್ಬಳ್ಳಿಯ ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆಯ ಜವಾಬ್ದಾರಿಯನ್ನು ನೀಡಲಾಗಿದೆ.
ಹೌದು ಸಧ್ಯ ಕರ್ತ್ಯವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಅಶೋಕ ಚೌಹ್ಹಾಣ್ ಅವರನ್ನು ವಿಶೇಷ ತನಿಖೆಯ ಮೇಲೆ ನಿಯೋಜನೆ ಮಾಡಲಾಗಿದ್ದು ಹೀಗಾಗಿ ಸಧ್ಯ ಈ ಒಂದು ಪೊಲೀಸ್ ಠಾಣೆಯ ಜವಾಬ್ದಾರಿಯನ್ನು ಪೊಲೀಸ್ ಆಯುಕ್ತ ಲಾಭೂರಾಮ್ ಅವರು ರಾಘವೇಂದ್ರ ಹಳ್ಳೂ ರಿಗೆ ಜವಾಬ್ದಾರಿಯನ್ನು ನೀಡಿ ಆದೇಶವನ್ನು ಮಾಡಲಾ ಗಿದ್ದು ಹೀಗಾಗಿ ಆದೇಶದಂತೆ ಇಂದು ರಾಘವೇಂದ್ರ ಹಳ್ಳೂರ ಅವರು ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆಯ ಜವಾಬ್ದಾರಿಯನ್ನು ವಹಿಸಿಕೊಂಡರು.
ಇನ್ನೂ ಕಚೇರಿಗೆ ಬರುತ್ತಿದ್ದಂತೆ ಠಾಣೆಯ ಸಿಬ್ಬಂದಿಗಳು ಸೇರಿದಂತೆ ಪೊಲೀಸ್ ಅಧಿಕಾರಿಗಳು ಬರಮಾಡಿಕೊಂ ಡರು. ಸಧ್ಯ ರಾಘವೇಂದ್ರ ಹಳ್ಳೂರ ಅವರೊಂದಿಗೆ ಅಶೋಕ ಚೌಹ್ಹಾನ್ ಅವರು ಠಾಣೆಯಲ್ಲಿ ವಿಶೇಷ ತನಿಖಾಧಿಕಾರಿಯಾಗಿ ಕರ್ತವ್ಯವನ್ನು ಮಾಡಲಿದ್ದಾರೆ.