ಧಾರವಾಡ –
ತುಮಕೂರಿನ ಶಿರಾ ಬಳಿ ನಡೆದ ಕ್ರೂಜರ್ ಅಪಘಾತದ ಕುರಿತಂತೆ ಮಾಜಿ ಸಚಿವ ಸಂತೋಷ ಲಾಡ್ ದಿಗ್ಬ್ರಮೆ ಗೊಂಡಿದ್ದಾರೆ.ಭೀಕರ ಅಪಘಾತದಲ್ಲಿ ಮಡಿದ ಕಾರ್ಮಿಕ ಕುಟುಂಬಕ್ಕೆ ಸಂತಾಪವನ್ನು ಸೂಚಿಸಿದ್ದಾರೆ. 9 ಜನ ವಲಸೆ ಕಾರ್ಮಿಕರು ದುರ್ಮರಣಕ್ಕೀಡಾಗಿದ್ದು ನಿಜಕ್ಕೂ ದುಃಖಕರ ವಿಷಯ ಎಂದಿದ್ದಾರೆ.ಅಲ್ಲದೇ ಮೃತ ಕಾರ್ಮಿಕರ ಆತ್ಮಕ್ಕೆ ಶಾಂತಿ ಕೋರುತ್ತಾ ಗಾಯಾಳುಗಳು ಬೇಗ ಚೇತರಿಸಿಕೊಳ್ಳ ಲೆಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಇದರೊಂದಿಗೆ ಕುಟುಂಬದವರನ್ನು ಕಳೆದುಕೊಂಡು ನೊಂದುಕೊಂಡಿರುವ ಕುಟುಂಬಕ್ಕೆ ಮಾಜಿ ಸಚಿವ ಸಂತೋಷ ಲಾಡ್ ಸಾಂತ್ವನ ಹೇಳಿ ಸಂತಾಪವನ್ನು ಸೂಚಿಸಿದ್ದಾರೆ.























