ಧಾರವಾಡ –
ಬುದ್ದಮಾತು ಹೇಳಿದ ಪೊಲೀಸ್ ಪೇದೆಯ ಮೇಲೆ ಯೆ ಹಲ್ಲೆ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ ಹೌದು ಧಾರವಾಡ ತಾಲೂಕಿನ ಚಂದನಮಟ್ಟಿ ಗ್ರಾಮದಲ್ಲಿ ಚಕ್ಕಡಿ ಓಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು.ಈ ವೇಳೆ ಕೆಲವರು ರಸ್ತೆ ಬಂದ್ ಮಾಡಿದ್ದರು.ಆಗ ಸ್ಥಳಕ್ಕೆ ತೆರಳಿದ ಗ್ರಾಮೀಣ ಠಾಣೆ ಪೊಲೀಸ್ ಕಾನ್ಸ್ಟೇಬಲ್ ಚಿದಾನಂದ ಅಬ್ಬಿಗೇರಿ ಅವರು ರಸ್ತೆ ಬಂದ್ ಮಾಡಬೇಡಿ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗುತ್ತದೆ ಎಂದು ಹೇಳಿದರು ಅಷ್ಟಕ್ಕೇ ಸಿಟ್ಟಿಗೆದ್ದ 9 ಜನರಿದ್ದ ಗುಂಪು ಕಾನ್ಸ್ಟೇಬಲ್ ಮೇಲೆ ಏಕಾ ಏಕಿ ತೀವ್ರ ಹಲ್ಲೆ ನಡೆಸಿದ್ದಾರೆ.ಕರ್ತವ್ಯನಿರತ ಪೊಲೀಸ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ಕರ್ತವ್ಯನಿರತ ಪೊಲೀಸ್ ಮೇಲೆ ಹಲ್ಲೆ ಮಾಡಿದ ಆರೋ ಪದಡಿ 9 ಜನರ ಮೇಲೆ ಧಾರವಾಡ ಗ್ರಾಮೀಣ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಯನ್ನು ಮಾಡಿ ನಂತರ ಕಾನ್ಸ್ಟೇಬಲ್ ಬೈಕ್‌ನ್ನೂ ಚರಂಡಿಗೆ ತಳ್ಳಲಾಗಿತ್ತು.ಈ ಸಂಬಂಧ ಶಂಕರ ಮೊರಬದ, ಶಿವರಾಜ ಮೊರಬದ,ನಾಗರಾಜ ಮೊರಬದ,ಹರೀಶ ಮುದಕಾಯಿ,ಸಹದೇವ ಚಿನ್ನಣ್ಣವರ,ಮಹಾಂತೇಶ ಕುಡೇಕರ,ಗಿರೀಶ ದೇಸಾಯಿ,ರಾಜು ಪಿರೋಜಿ,ಪ್ರಕಾಶ ಹುಲ್ಲಂಬಿ ಎಂಬುವವರ ಮೇಲೆ ಜಾತಿ ನಿಂದನೆ ಹಾಗೂ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಬಗ್ಗೆ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದ್ದು ಸಧ್ಯ ಪೊಲೀಸರು ದೂರನ್ನು ದಾಖಲು ಮಾಡಿ ಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.