ಹುಬ್ಬಳ್ಳಿ –
ಪ್ರಾಚೀನ ಕಾಲದ ಲಕ್ಷ್ಮೀ ಮೂರ್ತಿ ಎಂದು ನಂಬಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಹುಬ್ಬಳ್ಳಿಯ ನವನಗರದ ಪೊಲೀಸರು ಬೇಧಿಸಿದ್ದಾರೆ. ಇದೊಂದು ಪ್ರಾಚೀನ ಕಾಲದ ಮೂರ್ತಿ ಎಂದು ನಂಬಿಸಿದ ಖದೀಮರು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ನೆಪದಲ್ಲಿ ವಂಚನೆ ಮಾಡುತ್ತಿದ್ದರು.ಖಚಿತ ಮಾಹಿತಿಯ ಮೇಲೆಗೆ ಉಪ ಪೊಲೀಸ್ ಆಯುಕ್ತ ಕೆ ರಾಮರಾಜನ್ ಉತ್ತರ ಉಪವಿಭಾಗದ ಎಸಿಪಿ ಎಸ್ ಎಮ್ ರಾಗಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಗಿಳಿದ ನವನಗರ ಇನಸ್ಪೇಕ್ಟರ್ ಪ್ರಭು ಸೂರಿನ್ ತಮ್ಮ ಸಿಬ್ಬಂದ್ದಿಗಳೊಂದಿಗೆ ಕಾರ್ಯಾಚರಣೆ ಮಾಡಿ ನಕಲಿ ಮೂರ್ತಿ ಮಾರಾಟದ ಜಾಲವನ್ನು ಭೇಧಿಸಿದ್ದಾರೆ.
ಬೈರಿದೇವರಕೊಪ್ಪದ ನಮ್ಮ ಬಳಿ ಹಳೇಯ ಪುರಾತನದ ಲಕ್ಷ್ಮೀ ಮೂರ್ತಿ ಇದೆ ಎಂದು ಹೇಳಿದ್ದರು, ಬೈರಿದೇವರಕೊಪ್ಪ ಬಳಿ ಕಾರಿನಲ್ಲಿ ಲಕ್ಷ್ಮೀ ವಿಗ್ರಹವನ್ನ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಾಗಲಕೋಟೆ, ವಿಜಯಪುರ ಹಾಗೂ ಕಲಬುರಗಿ ಈ ಮೂರರು ಜಿಲ್ಲೆಗಳ ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಿಜಯಪುರದ ಆಳಂದದ ಜಳಕಿ ಗ್ರಾಮದ ರಾಜು ಶಿಂಧೆ, ಝಂಡಾಕಟ್ಟಿಯ ಇರ್ಫಾನ ನಬಿವಾಲೆ ,ಮುಬಾರಕ ಚೌಕ ನಿವಾಸಿ ಹುಸೇನಸಾಬ ಮಳ್ಳಿ, ಬಬಲೇಶ್ವರ ನಾಕಾದ ಬಾಬು ಜಾಧವ,ಬಾಗಲಕೋಟೆ ಜಿಲ್ಲೆ ರಬಕವಿಯ ಬನಹಟ್ಟಿ ತಾಲೂಕಿನ ಸಸಾಲಟ್ಟಿ ಗ್ರಾಮದ ಲಕ್ಷ್ಮಣ ಹಾದಿಮನಿ, ಬೆಳಗಾವಿಯ ಬಸವರಾಜ ಮುತಗೇಕರ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಎರಡು ಕಾರು ಹಾಗೂ ಪುರಾತನದೆಂದು ಹೇಳಲಾದ ವಿಗ್ರಹವನ್ನ ವಶಕ್ಕೆ ಪಡೆಯಲಾಗಿದೆ.ಎಪಿಎಂಸಿ ಠಾಣೆಯ ಇನ್ಸಪೆಕ್ಟರ್ ಪ್ರಭು ಸೂರಿನ್ , ಪಿಎಸೈ ಎಸ್.ಎಸ್.ಜಕ್ಕನಗೌಡರ, ಸಿಬ್ಬಂದ್ದಿಗಳಾದ ವಿಕ್ರಮ್ ಪಾಟೀಲ, ಎನ್.ಎಚ್.ಗುಡಿಮನಿ, ಕೆ.ಕೆ.ಕಾರಬಾರಿ, ಯು.ವೈ.ಕಾಡಮ್ಮನವರ, ಸಿ.ವೈ.ಬಕ್ಕಸದ, ಶರೀಫ ಶೇಖಬಾಯಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.