ಧಾರವಾಡ –
ಚಾಲಕನ ನಿಯಂತ್ರಣ ತಪ್ಪಿದ ಒಮ್ನಿ ಕಾರು ಅಪಘಾತಕ್ಕಿಡಾದ ಘಟನೆ ಧಾರವಾಡದಲ್ಲಿ ನಡೆದಿದೆ .
ಧಾರವಾಡದ ಟೋಲ್ ನಾಕಾ ಬಳಿ ಈ ಒಂದು ಅಪಘಾತ ನಡೆದಿದೆ.
ಹೋಗುತ್ತಿದ್ದ ಒಮ್ನಿ ಕಾರು ಏಕಾಎಕಿಯಾಗಿ ಚಾಲಕನ ನಿಯಂತ್ರಣ ತಪ್ಪಿದೆ.ಮುಂದೆ ಇದ್ದ ಆಟೋ ಬೈಕ್ ಗಳಿಗೆ ಒಮ್ನಿ ಕಾರು ಡಿಕ್ಕಿಯಾಗಿದೆ.
ಘಟನೆಯಲ್ಲಿ ನಾಲ್ಕು ಬೈಕ್ ಎರಡು ಆಟೋಗಳು ಜಖಂ ಆಗಿವೆ. ಯಾರಿಗೂ ದೊಡ್ಡ ಪ್ರಮಾಣದ ಗಾಯಗಳಾಗಿಲ್ಲ.
ಘಟನೆಯಲ್ಲಿ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನೂ ವಿಷಯ ತಿಳಿದ ಸಂಚಾರಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದರು. ಒಮ್ನಿ ಕಾರು ಚಾಲಕನನ್ನು ವಿಚಾರಣೆ ಮಾಡುತ್ತಿದ್ದಾರೆ. ಸಂಚಾರ ಅಸ್ತವ್ಯಸ್ಥಗೊಂಡಿದ್ದು ಎಲ್ಲವನ್ನೂ ಸಂಚಾರಿ ಪೊಲೀಸರು ಸರಿ ಮಾಡಿ ಸ್ಥಳದಲ್ಲೇ ಇದ್ದಾರೆ.