ಧಾರವಾಡ –
ಗ್ರಾಮ ಪಂಚಾಯತ ಚುನಾವಣೆಗೆ ತೆರೆ ಬಿದ್ದಿದೆ. ಇಂದು ಎರಡನೇಯ ಹಂತದಲ್ಲಿ ನಡೆದ ಮತದಾನ ಪ್ರಕ್ರಿಯೆಗಳ ಮೂಲಕ ಚುನಾವಣಾ ಪ್ರಕ್ರಿಯೆಗೆ ಕೊನೆಗೂ ತೆರೆ ಬಿದ್ದಿದೆ.ಎರಡು ಹಂತಗಳಲ್ಲಿ ನಡೆದ ಚುನಾವಣೆಗೆ ಧಾರವಾಡ ಜಿಲ್ಲೆಯಲ್ಲೂ ತೆರೆ ಬಿದ್ದಿದ್ದು ಎರಡು ಹಂತಗಳಲ್ಲಿ ನಡೆದ ಒಟ್ಟು ಜಿಲ್ಲೆಯ 136 ಗ್ರಾಮ ಪಂಚಾಯತಿ ಗಳ ಎರಡು ಹಂತದಲ್ಲಿ ಅಮರಗೋಳ ಮತ್ತು ಕಟ್ನೂರ ಗ್ರಾಮದಲ್ಲಿ ಮತದಾನ ನಡೆಯಲಿಲ್ಲ .
ಹೌದು ಮೀಸಲಾತಿ ಸಮಸ್ಯೆ ಮತದಾರರ ಪಟ್ಟಿ ಗೊಂದಲ ದಿಂದಾಗಿ ಇವೆರಡೂ ಗ್ರಾಮದಲ್ಲಿ ಮತದಾನ ನಡೆಯಲಿಲ್ಲ. ಬೇಡಿಕೆಗಳನ್ನು ಮುಂದಿಟ್ಟುಕೊಂಡು ಎರಡು ಗ್ರಾಮದ ಕೆಲ ವಾರ್ಡ್ ಗಳಲ್ಲಿ ಮತದಾನ ನಡೆಯಲಿಲ್ಲ. ಚುನಾವಣಾ ಅಧಿಕಾರಿಗಳು ಸಭೆ ಮಾಡಿ ಮಾತುಕತೆ ನಡೆಸಿದರು ಗ್ರಾಮಸ್ಥರು ಮತದಾನಕ್ಕೆ ಒಪ್ಪಲಿಲ್ಲ.
ಹೀಗಾಗಿ ಅಂತಿಮವಾಗಿ ಮತದಾನ ಕೇಂದ್ರದಿಂದ ಅಧಿಕಾರಿಗಳು ತೆರಳಿದರು. ಇನ್ನೂ ಈ ಕುರಿತು ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ನಿತೀಶ್ ಪಾಟೀಲ್ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದ್ದಾರೆ. ಚುನಾವಣಾ ಆಯೋಗ ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನೂ ಇವೆರಡೂ ಗ್ರಾಮಗಳನ್ನು ಬಿಟ್ಟರೆ ಜಿಲ್ಲೆಯಲ್ಲಿ ಮತದಾನ ಶಾಂತಯುತವಾಗಿ ನಡೆದಿದೆ.ಇದರೊಂದಿಗೆ ಮೂರು ಕಡೆಗಳಲ್ಲಿ ಕಣದಲ್ಲಿದ್ದ ಅಭ್ಯರ್ಥಿಗಳು ಸಾವಿಗೀಡಾಗಿದ್ದು ಅದನ್ನು ಆಯೋಗ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.