ಬೆಂಗಳೂರು –
ಸಧ್ಯ ರಾಜ್ಯದಲ್ಲಿ ಕರ್ತವ್ಯವನ್ನು ಮಾಡುತ್ತಿರುವ ಸೇವಾನಿರತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ವೊಂದನ್ನು ನೀಡಿದೆ. ಹೌದು ಶೇ.40ರಷ್ಟು ಮುಂಬಡ್ತಿಗೆ ಆರ್ಥಿಕ ಇಲಾಖೆ ಸಹಮತಿಯನ್ನು ನೀಡಿದೆ.ಹೌದು ರಾಜ್ಯ ಸರ್ಕಾರದಿಂದ ಕರ್ನಾಟಕ ಶಿಕ್ಷಣ ಇಲಾಖೆ ಸೇವೆ ಗಳ ನೇಮಕಾತಿ ನಿಯಮಗಳನ್ನು ಮಾರ್ಪಡಿ ಸಲಾಗಿದೆ
ಹೀಗಾಗಿ ಶೇ.60ರಷ್ಟು ನೇರ ನೇಮಕಾತಿ ಹಾಗೂ ಶೇ.40ರಷ್ಟು ಸೇವಾನಿರತರಿಗೆ ಮುಂಬಡ್ತಿಗೆ ಅವಕಾಶವನ್ನು ಇದರೊಂದಿಗೆ ನೀಡಲಾಗಿದೆ.ಈ ಮೂಲಕ ಸೇವಾನಿರತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಭರ್ಜರಿ ಗುಡ್ ನ್ಯೂಸ್ ನ್ನು ಈ ಮೂಲಕ ನೀಡಲಾಗಿದೆ.ಈ ಸಂಬಂಧ ಆರ್ಥಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಮಾಹಿತಿ ನೀಡಿದ್ದು ಆಡಳಿತ ಇಲಾಖೆಯ ಪ್ರಸ್ತಾವ ನೆಯನ್ನು ಪರಿಶೀಲಿಸಲಾಗಿದೆ ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು( ಸಾರ್ವಜನಿಕ ಶಿಕ್ಷಣ ಇಲಾಖೆ) ( ನೇಮಕಾತಿ) ನಿಯಮಗಳಲ್ಲಿ 6 ರಿಂದ 8ನೇ ತರಗತಿಯ ಪದವೀಧರ ಪ್ರಾಥಮಿಕ ಶಿಕ್ಷಕರ ವೃಂದದ ನೇಮಕಾತಿ ನಿಯಮವನ್ನು ಮಾರ್ಪ ಡಿಸಿ ಶೇ.60ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಯಿಂದ ಭರ್ತಿಗೆ ಅವಕಾಶ ನೀಡಲಾಗಿದೆ
ಇನ್ನೂ ಶೇ.40ರಷ್ಟು ಹುದ್ದೆಗಳನ್ನು ಸೇವಾನಿರತ ಪ್ರಾಥಮಿಕ ಶಿಕ್ಷಕರ ವೃಂದದಿಂದ ಮುಂಬಡ್ತಿಯ ಮೂಲಕ ಭರ್ತಿ ಮಾಡಲು ಅವಕಾಶವಾಗುವಂತೆ ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡುವ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯು ಸಹಮತಿ ನೀಡಿರೋದಾಗಿ ತಿಳಿಸಿದ್ದು ಇತ್ತ ಈ ಒಂದು ವಿಚಾರ ಕುರಿತಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನೌಡ ಪಾಟೀಲ್ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಶಿಕ್ಷಕರ ಧ್ವನಿಯಾಗಿ ನಿರಂತರವಾಗಿ ಧ್ವನಿಯನ್ನು ಎತ್ತಿದ್ದರು.ಕೊನೆಗೂ ಇದೇಲ್ಲಕ್ಕೂ ಸ್ಪಂದಿಸಿ ಈಗ ಗುಡ್ ನ್ಯೂಸ್ ನೀಡಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..