ಧಾರವಾಡ –
ಅಕ್ರಮವಾಗಿ ಸಾಗವಾನಿ ಕಟ್ಟಿಗೆಯನ್ನು ಸಾಗಿಸುತ್ತಿದ್ದ ಜಾಲವನ್ನು ಧಾರವಾಡ ವಲಯ ಅರಣ್ಯಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.ಧಾರವಾಡ ವ್ಯಾಪ್ತಿಯ ಅರವಟಗಿ ಹಾಗೂ ಕಲಕೇರಿ ಅರಣ್ಯ ಪ್ರದೇಶದಲ್ಲಿ ಬೆಲೆ ಬಾಳುವ ಸಾಗವಾನಿ ಮರಗಳನ್ನು ಕಡಿದು ತುಂಡುಗಳನ್ನಾಗಿ ಪರಿವರ್ತಿಸಿ ಸಾಗಾಟ ಮಾಡುವ ಸಮಯದಲ್ಲಿ
1.292 ಘ.ಮೀ ಸಾಗವಾನಿ ಕಟ್ಟಿಗೆ, ಒಟ್ಟು ಅಂದಾಜು ಮೌಲ್ಯ ರೂ 1,50,000=00 (ಒಂದೂವರೆ ಲಕ್ಷ ರೂಪಾಯಿಗಳು) ಮತ್ತು ಒಂದು ದ್ವಿಚಕ್ರ ವಾಹನ, ಹಾಗೂ ಸಾಗಾಟನೆಗೆ ಉಪಯೋಗಿಸಿದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಎರಡು ಲೈಲೆಂಡ್-207 ವಾಹನಗಳನ್ನು ಮಾಲು ¸ ಸಮೇತ ನಾಲ್ಕು ಆರೋಪಿಗಳನ್ನು ಬಂಧಿಸಿ ಆಧುನಿಕ ತಂತ್ರಜ್ಞಾನ ಬಳಸಿ ಕಟ್ಟಿಗೆ ಕತ್ತರಿಸುತ್ತಿದ್ದ ವಸ್ತುಗಳನ್ನು ಜಪ್ತ ಮಾಡಲಾಗಿದೆ.ಇನ್ನುಳಿದ ಆರೋಪಿತರನ್ನು ಬಂಧಿಸಲು ಕ್ರಮಕೈಗೊಂಡಿದ್ದು ಪ್ರಕರಣದ ತನಿಖೆ ಮುಂದುವರೆದಿರುತ್ತದೆ.ಸದರಿ ಆರೋಪಿಗಳು ಕರ್ನಾಟಕ ಅರಣ್ಯ ಕಾಯಿದೆಯನ್ನು ಉಲ್ಲಂಘಿಸಿ ಶಿಕ್ಷಾರ್ಹ ಅಪರಾಧ ಎಸಗಿರುತ್ತಾರೆ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕಾಶ ಲಕ್ಷ್ಮಣ ಪಾಟೀಲ ಉರ್ಪ ಹೊಸಮನಿ,ಹೊನ್ನಾಪೂರ¸ ಸಂತೋಷ ಪಕ್ಕಿರಪ್ಪ ಶೆರಿಮನಿ ,ರಾಮಾಪೂರ ,ದ್ಯಾಮನ್ನ ಪಕ್ಕೀರಪ್ಪ
ಶೆರಿಮನಿ,ರಾಮಾಪೂರ ,ಬಸವರಾಜ ಕರಿಯಪ್ಪ ನೀರಲಗಿ,ರಾಮಾಪೂರ ಇವರನ್ನು ಬಂಧಿಸಲಾಗಿದೆ.
ಮಂಜುನಾಥ ಚವ್ಹಾಣ ಮುಖ್ಯ ಅರಣ್ಯ ¸ ಸಂರಕ್ಷಣಾ ಅಧಿಕಾರಿಗಳು ಧಾರವಾಡ ವೃತ್ತ ಹಾಗೂ ಯಶಪಾಲ್ ಕ್ಷೀರಸಾಗರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಧಾರವಾಡ ವಿಭಾಗ,
ಶ್ಸಂತೋಷ ಕೆಂಚಪ್ಪನವರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಧಾರವಾಡ ವಿಭಾಗ ರವರ
ಮಾರ್ಗದರ್ಶನದಲ್ಲಿ ಆರ್ ಎಸ್ ಉಪ್ಪಾರ ವಲಯ ಅರಣ್ಯಾಧಿಕಾರಿ ಧಾರವಾಡ ವಲಯ, ಉಪವಲಯ
ಅರಣ್ಯಾಧಿಕಾರಿ ಯಲ್ಲಾನಾಯಕ ಹಮಾಣಿ, ಪಿ.ಡಿ.ಮಣಕೂರ, ಎಂ.ಡಿ.ಲಮಾಣಿ, ಜಿ.ಎಮ್,ಕಾಂಬಳೆ,ಸಿ.ಎಸ್.ರೊಟ್ಟಿ ಅರಣ್ಯ ರಕ್ಷಕರು ,ವಿಠ್ಠಲ ಜೋನಿ, ರಘು ಕರಿಯವರ ರಂಗಪ್ಪ ಕೋಳಿ, ಕಲ್ಲಪ್ಪ ಕೇಂಗಾರ,
ಎಸ್.ಪಿ.ಹಿರೇಮಠ, ¸ ಸಂಗಣ್ಣ ಕರಡಿ, ಶಿವರಾಂ ಚವ್ಹಾಣ ಹಾಗೂ ಧಾರವಾಡ ವಲಯದ ಸಿಬ್ಬಂದಿಗಳು ದಾಳಿಯಲ್ಲಿ
ಭಾಗವಹಿಸಿದ್ದರು.