ಹುಬ್ಬಳ್ಳಿ –
ಜೆಡಿಎಸ್ ಪಕ್ಷಕ್ಕೆ ಗುಡ್ ಬೈ ಹೇಳಲು ಹುಬ್ಬಳ್ಳಿಯ ರಾಜಣ್ಣ ಕೊರವಿ ಮುಂದಾಗಿದ್ದಾರೆ. ಸುದ್ದಿ ಸಂತೆ ವೇಬ್ ನ್ಯೂಸ್ ನೊಂದಿಗೆ ಮಾತನಾಡಿದ ಅವರು ಕಳೆದ ಹಲವಾರು ವರುಷಗಳಿಂದ ಜೆಡಿಎಸ್ ಪಕ್ಷಕ್ಕಾಗಿ ಸಾಕಷ್ಟು ಪ್ರಮಾಣದಲ್ಲಿ ದುಡಿದು ದುಡಿದು ಸಾಕಾಗಿದೆ.

ಇನ್ನೂ ಎಷ್ಟಂತ ದುಡಿಯಬೇಕು ಎಷ್ಟಂತ ಮಾಡಬೇಕು ನಮಗೆ ಜೆಡಿಎಸ್ ಪಕ್ಷದಲ್ಲಿ ಸರಿಯಾದ ಸೂಕ್ತವಾದ ಯಾವುದೇ ಸ್ಥಾನ ಮಾನವು ಸಿಗುತ್ತಿಲ್ಲ ಹೀಗಾಗಿ ಭವಿಷ್ಯವನ್ನು ಮುಂದಿಟ್ಟಕೊಂಡು ಬಿಜೆಪಿ ಸೇರುತ್ತಿದ್ದೇನೆ ಎಂದರು.

ಈಗಾಗಲೇ ಜೆಡಿಎಸ್ ಪಕ್ಷದಲ್ಲಿ ಹಲವು ವರುಷಗಳಿಂದ ಕಷ್ಟ ಪಟ್ಟು ಪಕ್ಷವನ್ನು ಸಂಘಟನೆ ಮಾಡಿದ್ದೇನೆ ನಮ್ಮ ಕಷ್ಟ ನೋವುಗಳಿಗೆ ಪಕ್ಷದ ಮುಖಂಡರು ಹೇಳಿಕೊಳ್ಳುವಷ್ಟು ಬೆಂಬಲ ನೀಡಲಿಲ್ಲ ಹೀಗಾಗಿ ಬರುವ ಪಾಲಿಕೆಯ ಚುನಾವಣೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಸೇರುತ್ತಿರುವುದಾಗಿ ಹೇಳಿದರು.

ಈ ಕುರಿತಂತೆ ಈಗಾಗಲೇ ಒಂದೇರೆಡು ಬಾರಿ ಸ್ಥಳೀಯ ಬಿಜೆಪಿ ನಾಯಕರೊಂದಿಗೆ ಮಾತುಕತೆ ಮಾಡಿದ್ದು ಶೀಘ್ರದಲ್ಲಿಯೇ ದಿನಾಂಕವನ್ನು ನಿಗದಿ ಮಾಡಿ ಸೇರ್ಪಡೆಯಾಗೊದಾಗಿ ಹೇಳಿದರು. ಇದರೊಂದಿಗೆ ಹುಬ್ಬಳ್ಳಿಯಲ್ಲಿ ಮಹಾನಗರ ಪಾಲಿಕೆಯಲ್ಲಿ ಇನ್ನೂ ಮುಂದೆ ಜೆಡಿಎಸ್ ಪಕ್ಷ ಕೇವಲ ಹೆಸರಿಗೆ ಮಾತ್ರ ಆದಂತಾಗುತ್ತದೆ.

ರಾಜಣ್ಣ ಕೊರವಿ ಅಂದರೆ ಹುಬ್ಬಳ್ಳಿಯ ನಗರದಲ್ಲಿ ಜೆಡಿಎಸ್ ಪಕ್ಷದ ಪ್ರಮುಖವಾಗಿ ಇವರೇ ಪಕ್ಷದ ಮುಖಂಡರಾಗಿದ್ದರು. ಹಲವಾರು ಕಾರ್ಯಕ್ರಮಗಳ ಮೂಲಕ ಸಾಕಷ್ಟು ಪ್ರಮಾಣದಲ್ಲಿ ಸಂಘಟನೆ ಮಾಡಿದ್ದರು. ಅದ್ಯೊಕೋ ಏನೋ ದಿಢೀರನೇ ಈ ಒಂದು ನಿರ್ಧಾರವನ್ನು ಇವರು ಕೈಗೊಂಡಿದ್ದು ಪ್ರಮುಖ ವಿಕೇಟ್ ವೊಂದು ಬಿಜೆಪಿ ಪಾಲಾಗಿದ್ದು ಈಗಾಗಲೇ ಹೆಸರಿಗೆ ಮಾತ್ರ ಜೆಡಿಎಸ್ ಪಕ್ಷ ಇದ್ದಂತಾಗಿದ್ದು

ಇನ್ನೂ ಮುಂದೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾಜಿ ಶಾಸಕ ಎನ್ ಎಚ್ ಕೊನರಡ್ಡಿ ಅವರಷ್ಟೇ ಪಕ್ಷದ ನಾಯಕರಿದ್ದು ರಾಜಣ್ಣ ಕೊರವಿ ರಾಜಿನಾಮೆ ನಂತರ ಪಕ್ಷದ ಪರಸ್ಥಿತಿ ಏನು ಎಂಬ ಚಿಂತೆಯನ್ನು ಬೆಂಗಳೂರಿನಲ್ಲಿರುವ ನಾಯಕರು ವಿಚಾರ ಮೊಡೊದು ಅವಶ್ಯಕವಿದೆ ಇಲ್ಲವಾದರೆ ಪಾಲಿಕೆಯ ಚುನಾವಣೆ ಬರುವಷ್ಟರಲ್ಲಿ ಮತ್ತಷ್ಟು ಬದಲಾವಣೆಗುವ ಮುನ್ನ ಎಚ್ಚೇತ್ತುಕೊಳ್ಳೊದು ಅವಶ್ಯಕವಿದೆ.