ತುಮಕೂರು –
ಮಾಜಿ Mla ಗೆ ತಹಶೀಲ್ದಾರ ಕಚೇರಿಯಲ್ಲಿ ಲಂಚಕ್ಕೆ ಬೇಡಿಕೆ – ಲಂಚಕ್ಕೆ ಬೇಡಿಕೆ ವಿಚಾರ ತಿಳಿದು ತಹಶೀಲ್ದಾರ ಕಚೇರಿಯ ಸಿಬ್ಬಂದಿಗಳಿಗೆ ನೀರಿಳಿಸಿದ ಮಾಜಿ ಶಾಸಕ ಲಂಚಾವತಾರದ ಬೋರ್ಡ್ ಹಾಕುವಂತೆ ಒತ್ತಾಯ ಹೌದು
ವಾಸಸ್ಥಳದ ಧೃಢಿಕರಣವನ್ನು ಮಾಡಿಕೊಡಲು ಮಾಜಿ ಶಾಸಕರೊಬ್ಬರಿಗೆ 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟ ಘಟನೆ ತುಮಕೂರಿನಲ್ಲಿ ನಡೆದಿದೆ.ವಾಸಸ್ಥಳಕ್ಕೆ ಧೃಢೀಕರಣಕ್ಕೆ ಲಂಚಕ್ಕೆ ಬೇಡಿ ಇಟ್ಟಿದ್ದಾರೆ ತಹಶೀಲ್ದಾರ ಕಚೇರಿಯ ಸಿಬ್ಬಂದಿಗಳು.ಈ ಒಂದು ವಿಚಾರ ಗಮನಕ್ಕೆ ಬರುತ್ತಿದ್ದಂತೆ ರೋಷಾವೇಷದಿಂದ ತಹಸಿಲ್ದಾರ್ ಕಚೇರಿಗೆ ನುಗ್ಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ನೌಕರರನ್ನು ತಹಶೀಲ್ದಾರರನ್ನು ತರಾಟೆಗೆ ತಗೆದುಕೊಂಡಿದ್ದಾರೆ,
ತಹಶೀಲ್ದಾರ್ ಗೆ ನಿಮ್ಮ ಕಚೇರಿಯಲ್ಲಿ ನಡೆ ಯುತ್ತಿದೆ ಲಂಚಾವತಾರ ನಿಮಗೆಷ್ಟು ಪಾಲು ಇದೆ.ತಹಸೀಲ್ದಾರ್ ಕಚೇರಿಯಲ್ಲಿ ಯಾವುದಕ್ಕೆ ಎಷ್ಟೆಷ್ಟು ಲಂಚದ ರೇಟ್ ಬೊಲ್ಡ್ ಹಾಕುವಂತೆ ಮಾಜಿ ಶಾಸಕರ ಅವಾಜ್ ಹಾಕಿದ್ದಾರೆ.ಮಾಜಿ ಶಾಸಕರನ್ನೇ ಲಂಚ ಕೇಳಿದ ಆರೋಪ ಸಧ್ಯ ವೈರಲ್ ಆಗಿದ್ದು ಸಾಕಷ್ಟು ಪ್ರಮಾಣದಲ್ಲಿ ಚರ್ಚೆ ಕೂಡಾ ಆಗುತ್ತಿದೆ.
ಮಾಜಿ ಶಾಸಕರಿಗೆ ಬರೋಬರೀ 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು ಗಂಭೀರವಾದ ವಿಚಾರವಾಗಿದ್ದು ವಾಸಸ್ಥಳಕ್ಕೆ ಧೃಢೀಕರಣಕ್ಕೆ ಲಂಚದ ಬೇಡಿಕೆ ಇಡಲಾಗಿದೆ.ಇದು ತುರುವೇಕೆರೆ ತಹಸೀಲ್ದಾರ್ ಕಚೇರಿಯಲ್ಲಿನ ದೊಡ್ಡ ಅವಾಂ ತರದ ಕರ್ಮಕಾಂಡವಾಗಿದೆ
ತುಮಕೂರು ಜಿಲ್ಲೆಯ ತುರುವೇಕೆರೆ ತಹಸೀ ಲ್ದಾರ್ ಕಚೇರಿಯಲ್ಲಿ ಈ ಒಂದು ಘಟನೆ ಬೆಳಕಿಗೆ ಬಂದಿದೆ.ಮಾಜಿ ಶಾಸಕ ಮಸಾಲ ಜಯರಾಂ ವಾಸಸ್ಥಳ ಧೃಢೀಕರಣಕ್ಕೆ ಲಂಚಕ್ಕೆ ಬೇಡಿಕೆಯನ್ನು ಇಡಲಾಗಿತ್ತು.ಆರ್ ಐ ಮಂಜುನಾಥ್, ವಿಎ ಯಿಂದ ಹಣಕ್ಕೆ ಬೇಡಿಕೆ ಇಡಲಾಗಿದೆಯಂತೆ.
ಇಬ್ಬರನ್ನೂ ಈ ಒಂದು ಕೂಡಲೇ ಅಮಾನತು ಮಾಡುವಂತೆ ಒತ್ತಾಯವನ್ನು ಕೂಡಾ ಮಾಜಿ ಶಾಸಕರು ಮಾಡಿದ್ದಾರೆ.ಮತ್ತೊಬ್ಬರು ವಾಸವಿ ಲ್ಲದಿದ್ರು ಎರಡು ದಿನದಲ್ಲಿ ವಾಸಸ್ಥಳ ನೀಡಿರೋ ಆರೋಪ ಕೂಡಾ ಕೇಳಿ ಬಂದಿದ್ದು ಏನೇನಾಗ ಲಿದೆ ಎಂಬೊದನ್ನು ಕಾದು ನೋಡಬೇಕಿದೆ.
ದಾಖಲೆ ಕೈಯಲ್ಲಿ ಇಡಿದು ಆಕ್ರೋಶ ಹೊರ ಹಾಕಿದ್ದಾರೆ ಮಸಾಲ ಜಯರಾಂ.ನಮಗೆ ಹೀಗಾದ್ರೆ ಜನಸಾಮಾನ್ಯರ ಗತಿ ಏನು ಎನ್ನುತ್ತಾ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.ಲಂಚದ ಬೋಲ್ಡ್ ಹಾಕುವಂತೆ ತಹಸೀಲ್ದಾರ್ ಅವಾಜ್ ಮಾಡಿದ್ದಾರೆ ಮಾಜಿ ಶಾಸಕ.
ಸುದ್ದಿ ಸಂತೆ ನ್ಯೂಸ್ ತುಮಕೂರು…..