ಹುಬ್ಬಳ್ಳಿ –
ಸಿಎಂ ಬದಲಾವಣೆ ಆಗುತ್ತೆ, ಆದ್ರೆ ಅದು ಯಾವಾಗ ಅಗುತ್ತೆ ಗೊತ್ತಿಲ್ಲ ಸಿಎಂ ಬಿಎಸ್ ವೈ ಯವರೇ ಪೂರ್ಣಾವಧಿ ಸಿಎಂ ಎಂಬ ಅರುಣ್ ಸಿಂಗ್ ಹೇಳಿಕೆ ವಿಚಾರ ಮತ್ತೆ ಅವರು ತೆಗೆದು ಹಾಕ್ತಿವಿ ಅಂತ ಹೇಳೋಕೆ ಆಗುತ್ತಾ..? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದರು ಸಿದ್ದರಾಮಯ್ಯ. ಬಿಎಸ್ ವೈ ಸಿಎಂ ಸ್ಥಾನದಿಂದ ಕೇಳಗಿಳಿಯೋದು ಪಕ್ಕಾ ಬಿಜೆಪಿಯ ಅವಧಿ ಪೂರ್ಣಗೊಳಿಸುತ್ತೆ ಆದ್ರೆ ಸಿಎಂ ಸ್ಥಾನ ಬದಲಾವಣೆಯಾಗುತ್ತೆ ಮಧ್ಯಂತರ ಚುನಾವಣೆ ಆಗೋಲ್ಲ ಎಂದರು.
ಕೊರೊನಾ ವ್ಯಾಕ್ಸಿನ್ ಎಲ್ಲರೂ ತೊಗೋಬೇಕು,ಆದ್ರೆ ಅದು ಸೈಂಟಿಪಿಂಕ್ ಆಗಿ ಪ್ರೂವ್ ಆಗಬೇಕು. ಅದು 80 ಪರ್ಸೆಂಟ್ ಗಿಂತ ಜಾಸ್ತಿ ಎಪೆಕ್ಟ್ ಇರಬೇಕು ಆ ಬಗ್ಗೆ ನಾನು ರಿಯಾಕ್ಟ್ ಮಾಡೋಕೆ ಎಕ್ಸ್ ಪಟ್೯ ಅಲ್ಲ ಆ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆ.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನಾವೇ ಹೆಚ್ಚು ಸ್ಥಾನ ಗೆದ್ದಿದ್ದೇವೆ ಹಳೇ ಮೈಸೂರು, ರಾಜ್ಯದಲ್ಲಿ ನಾವೇ ನಂಬರ್ ಒನ್ ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ ಬಿಜೆಪಿಯವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎನ್ ಡಿಎ ಜೊತೆ ಜೆಡಿಎಸ್ ಮೈತ್ರಿ ವಿಚಾರ ಜೆಡಿಎಸ್ ನವರ ಬಗ್ಗೆ ನಾನು ಮಾತನಾಡಲ್ಲ ಮೀಸಲಾತಿ ಕೇಳೋದು ತಪ್ಪಲ್ಲ
ನಾನು ಸಿಎಂ ಆಗಿದ್ದಾಗ ನಾಲ್ಕು ಸಮುದಾಯವನ್ನು ಶಿಫಾರಸ್ಸು ಮಾಡಿದ್ದೆ ಈಶ್ವರಪ್ಪ ಸಧ್ಯ ಕೇಂದ್ರ ಸರ್ಕಾರವನ್ನು ಕೇಳಲಿ ಈಶ್ವರಪ್ಪ ಕುರುಬ ಸಮುದಾಯವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಇದು ಆರ್ ಎಸ್ ಎಸ್ ಹಾಗೂ ಈಶ್ವರಪ್ಪ ಕುತಂತ್ರ ಬಿಜೆಪಿಯ ಸರ್ಕಾರವಿದೆ ಈಶ್ವರಪ್ಪ ಹೋರಾಟ ಮಾಡೋದು ಬಿಟ್ಟು ಮೀಸಲಾತಿ ಕೊಡಿಸಲಿ ಎಂದು ಸಚಿವ ಈಶ್ವರಪ್ಪ ವಿರುದ್ಧ ಸಿದ್ಧರಾಮಯ್ಯ ಹರಿಹಾಯ್ದರು.