ಹುಬ್ಬಳ್ಳಿ –
ಹುಬ್ಬಳ್ಳಿಯ ಹೊಸ ನ್ಯಾಯಾಲಯದ ಎದುರಿಗೆ ಹೆಬ್ಬಾವೊಂದು ಕಂಡು ಬಂದಿತು. ಎಲ್ಲರೂ ತಮ್ಮ ಪಾಡಿಗೆ ತಾವುಗಳು ರಸ್ತೆಯಲ್ಲಿ ಹೊರಟಿದ್ದರು ಇತ್ತ ನ್ಯಾಯಾಲಯದ ಎದುರಿಗೆ ಹೆಬ್ಬಾವೊಂದು ರಸ್ತೆ ಪಕ್ಕದಲ್ಲಿ ಹೊರಟಿತ್ತು.
ಚರಂಡಿ ಮೇಲೆ ಹಾಯ್ದು ಈ ಒಂದು ಹೆಬ್ಬಾವು ಯಾರಿಗೂ ಹೆದರದೆ ತಾನು ನಡೆದಿದ್ದೇ ರಾಜ ಮಾರ್ಗ ಎಂದುಕೊಂಡು ಹೊರಟಿತು. ಸಾಕಷ್ಟು ವಾಹನಗಳ ಸಂಚಾರ ಜನರ ಓಡಾಟ ಹೀಗೆ ಜನದಟ್ಟಣೆಯ ನಡುವೆ ಹೆಬ್ಬಾವು ಮನೆಯ ಮುಂದೆ ಹಾಯ್ದು ಹೊರಟಿತ್ತು.
ಯಾರೋ ಒಬ್ಬರು ಅಯ್ಯೋ ಅಲ್ಲಿ ನೋಡಿ ಹಾವು ಹಾವು. ಅನ್ನುತ್ತಲೇ ಮತ್ತೊಬ್ಬರು ಅಯ್ಯೋ ಇದು ಹೆಬ್ಬಾವು ಎಂದಿದ್ದಾರೆ. ಕೆಲವರು ಭಯದಿಂದ ಅಲ್ಲಿಂದ ಎಸ್ಕೇಫ್ ಆದರೆ ಇನ್ನೂ ಕೆಲವರು ಕುತೂಹಲದಿಂದ ನೋಡುತ್ತಾ ನಿಂತುಕೊಂಡಿದ್ದರು.
ಸಾಮಾನ್ಯವಾಗಿ ಎಲ್ಲಾ ಹಾವುಗಳನ್ನು ನೋಡುತ್ತಾರೆ ಆದರೆ ಹೆಬ್ಬಾವು ನೊಡಲು ಸಿಗೊದು ತುಂಬಾ ಅಪರೂಪ. ಹೀಗಿರುವಾಗ ಈ ಒಂದು ಹೆಬ್ಬಾವು ನೋಡಿದ ಮಧುಶ್ರೀ ದಿವಟೆ ತಮ್ಮ ಮೊಬೈಲ್ ನಲ್ಲಿ ಈ ಒಂದು ಹೆಬ್ಬಾವಿನ ಸಂಚಾರವನ್ನು ಚಿತ್ರಿಕರಣ ಮಾಡಿದ್ದಾರೆ.
ನೋಡಲು ಹೆಬ್ಬಾವು ಯಾವುದೇ ಭಯ ಅಂಜಿಕೆ ಇಲ್ಲದೇ ಮಧುಶ್ರೀ ಧೈರ್ಯದಿಂದ ತಮ್ಮ ಮೊಬೈಲ್ ನಲ್ಲಿ ಚಿತ್ರಿಕರಣ ಮಾಡಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಹೆಸರಾಂತ ಈಜು ಪಟು ಆಗಿರುವ ಮಧುಶ್ರೀ ತುಂಬಾ ಧೈರ್ಯ ಸಾಹಸ ದಿಂದ ಚಿತ್ರಿಕರಣ ಮಾಡಿರುವ ವಿಡಿಯೋ ಈಗ ಹುಬ್ಬಳ್ಳಿ ಧಾರವಾಡದಲ್ಲಿ ಸಾಕಷ್ಟು ವೈರಲ್ ಆಗಿದೆ.
ಕೆಲ ಸಮಯ ನಂತರ ಹೆಬ್ಬಾವು ತನ್ನ ಪಾಡಿಗೆ ತಾನು ಚರಂಡಿ ಪಕ್ಕದಲ್ಲಿದ್ದ ಖುಲ್ಲಾ ಜಾಗೆಗೆ ತೆರಳಿತು. ಒಟ್ಟಾರೆ
ಆ ಹಾವು ಈ ಹಾವು ಗಳನ್ನು ನೋಡುತ್ತಿದ್ದ ದರ್ಶನ ಮಾಡುತ್ತಿದ್ದ ಹಾವುಗಳ ನಡುವೆ ಹೆಬ್ಬಾವೊಂದು ಹುಬ್ಬಳ್ಳಿಯಲ್ಲಿ ಕಾಣಿಸಿಕೊಂಡಿದ್ದು ಅದರ ನಡುವೆ ಧೈರ್ಯದಿಂದ ವಿಡಿಯೋ ಚಿತ್ರಿಕರಣ ಮಾಡಿದ ಮಧುಶ್ರೀಯ ಧೈರ್ಯ ಮೆಚ್ಚಲೇಬೇಕು.ಇತ್ತ ಹೆಬ್ಬಾವು ಏನಾದರೂ ಮಾಡಿತು ಅಂದುಕೊಂಡು ಹೊಡೆಯದೇ ಬಡಿಯದೇ ಸುಮ್ಮನೆ ನೋಡಿದ ಹುಬ್ಬಳ್ಳಿಯ ಜನತೆಯ ಹೃದಯ ವಿಶಾಲತೆ ದೊಡ್ಡದು.