ಧಾರವಾಡ –
PDO ಹಾಗೂ PDO ಪತಿ ಧಾರವಾಡದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಧಾರವಾಡದಲ್ಲಿ ಎಸಿಬಿ ದಾಳಿಯಲ್ಲಿ ದಂಪತಿಗಳು ಬಲೆಗೆ ಬಿದ್ದಿದ್ದಾರೆ.

ಪುಷ್ಪಲತಾ ಮೇದಾರ, ಎಸಿಬಿ ಬಲೆಗೆ ಬಿದ್ದ ಪಿಡಿಒ ಅಧಿಕಾರಿಯಾಗಿದ್ದಾರೆ.ಪತಿಯ ಮೂಲಕ ಲಂಚ ಸ್ವೀಕರಿಸುತ್ತಿದ್ದರು ಪಿಡಿಒ ಪುಷ್ಪಲತಾ ಅವರು.

ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಪಂ ಪಿಡಿಒ ಆಗಿದ್ದಾರೆ ಪುಷ್ಪಲತಾ.ಸಾಗರ ಹೂಗಾರ ಎಂಬುವವರಿಂದ ಲಂಚ ಸ್ವೀಕಾರ ಮಾಡುತ್ತಿದ್ದರು.
ಜಮೀನು ಎನ್ಎ ಮಾಡಲು 20 ಸಾವಿರ ಲಂಚ ಸ್ವೀಕಾರ ಮಾಡುತ್ತಿದ್ದರು.ಸಾಗರನಿಂದ ಲಂಚ ಸ್ವೀಕಾರ ಮಾಡಿದ್ದ ಪತಿ ಮಹಾಂತೇಶ ಲಂಚ ಸ್ವೀಕರಿಸುವಾಗಲೇ ಎಸಿಬಿ ದಾಳಿಯಾಗಿದೆ.

ಪತಿ ಮಹಾಂತೇಶ ಹಾಗೂ ಪಿಡಿಒ ಪುಷ್ಪಲತಾ ಇಬ್ಬರು ದಂಪತಿಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಡಿವೈಎಸ್ಪಿ ವೇಣುಗೋಪಾಲ ನೇತೃತ್ವದಲ್ಲಿ ದಾಳಿಯಾಗಿದೆ.