ಧಾರವಾಡ –
ಹಣದ ವ್ಯವಹಾರದ ಹಿನ್ನೆಲೆಯಲ್ಲಿ ಯುವಕನಿಗೆ ಚಾಕು ಇರಿತ ಮಾಡೊದ ಘಟನೆ ಧಾರವಾಡದಲ್ಲಿ ನಡೆದಿದೆ.ಧಾರವಾಡ ನಗರದ ಸಪ್ತಾಪೂರ ಬಳಿ ಈ ಒಂದು ಘಟನೆ ನಡೆದಿದೆ.

ಕಾಂತೇಶ ಲಮಾಣಿ ಎಂಬುವವನ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾರೆ ಇಬ್ಬರು ಯುವಕರು.ಕಾಂತೇಶ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಪ್ರಾಣಾಪಾಯರಿಂದ ಪಾರಾಗಿದ್ದಾನೆ ಕಾತೇಶ.

ಕಾಂತೇಶ ಧಾರವಾಡ ನಗರದ ಲಕ್ಷ್ಮಿಸಿಂಗನಕೆರಿ ನಿವಾಸಿಯಾಗಿದ್ದು ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದ್ದು

ವಿಷಯ ತಿಳಿದ ಉಪನಗರ ಇನ್ಸ್ಪೆಕ್ಟರ್ ಪ್ರಮೋದ್ ಯಲಿಗಾರ ಮತ್ತು PSI ಶ್ರೀಮಂತ ಹುಣಸಿಕಟ್ಟಿ ಮತ್ತು ಕ್ರೈಮ್ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.