ಹುಬ್ಬಳ್ಳಿ –
ಸೋಮವಾರ ಕೆಪಿಸಿಸಿಯಿಂದ ಹುಬ್ಬಳ್ಳಿಯಲ್ಲಿ ಸಂಕಲ್ಪ ಸಮಾವೇಶ ಕಾರ್ಯಕ್ರಮವನ್ನು ಹಮ್ಮಿಕೊಳಲಾಗಿದೆ ಎಂದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹುಬ್ಬಳ್ಳಿಯ ಖಾಸಗಿ ಹೊಟೇಲ್ ನಲ್ಲಿ ಬೆಳಿಗ್ಗೆ 11 ಗಂಟೆಯುಂದ ಈ ಸಮಾವೇಶ ನಡೆಯಲಿದೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದದೆ. ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯರನ್ನು ಗುರಿಯಾಗಿಟ್ಟುಕೊಂಡು ಸಮಾವೇಶವನ್ನು ಆಯೋಜಿಸಲಾಗಿದೆ. ಮಾಜಿ ಸಿ ಎಂ ಸಿದ್ಧರಾಮಯ್ಯ, ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ, ಈಶ್ವರ ಖಂಡ್ರೆ, ಸೇರಿದಂತೆ ಬೆಳಗಾವಿ ವಿಭಾಗದ ನೂರಾರು ಪದಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಬೆಳಗಾವಿ ವಿಭಾಗದ ಎಂಟು ಜಿಲ್ಲೆಗಳ 700 ಕ್ಕೂ ಅಧಿಕ ಮುಖಂಡರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಪಕ್ಷ ಸಂಘಟನೆ, ಹೋರಾಟವೇ ಸಮಾವೇಶದ ಉದ್ದೇಶವಾಗಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ಹೋರಾಟ ಮಾಡುವ ಉದ್ದೇಶದಿಂದ ಸಂಕಲ್ಪ ಸಮಾವೇಶದ ಮಂದಿನ ದಿನಗಳಲ್ಲಿ ಬೂತ್ ಮಟ್ಟದ ಕಮಿಟಿಗಳನ್ನ ಮಾಡಲಿದ್ದೇವೆ ರಾಜ್ಯದ ಜನ ಬಿಜೆಪಿ ವಿರುದ್ಧ ಭ್ರಮನಿರಸಗೊಂಡಿದ್ದು.

ಕಾಂಗ್ರೆಸ್ ಪಕ್ಷದತ್ತ ರಾಜ್ಯದ ಜನ ಒಲವು ತೋರುತ್ತಿದ್ದಾರೆ ತಾಲೂಕು ಪಂ, ಜಿಲ್ಲಾ ಪಂ ಹಾಗೂ ಲೋಕಸಭಾ ಚುನಾವಣಾ ರೂಪುರೇಷೆಗಳ ಕುರಿತು ಸಮಾವೇಶದಲ್ಲಿ ಚರ್ಚೆ ಬೆಳಗಾವಿ ವಿಭಾಗ ಮಟ್ಟದ ಪಧಾದಿಕಾರಿಗಳ ಜೊತೆ ಚರ್ಚೆ ಮಾಡಲಾಗುತ್ತಿದೆ.
ರಾಜ್ಯದ ಲೋಕಸಭಾ ಸದಸ್ಯರು ತಮ್ಮ ಕ್ಷೇತಗಳಲ್ಲಿ ಹುಲಿಗಳಂತೆ ಘರ್ಜಿಸುತ್ತಾರೆ ಆದರೆ ಮೋದಿಯವರ ಮುಂದೆ ಬೆಕ್ಕುಗಳಾಗಿರುತ್ತಾರೆ ಎಂದರು ಇನ್ನೂ ಬಿಜೆಪಿ 30 ಪರ್ಸೆಂಟ್ ಸರ್ಕಾರವಾಗಿದೆ ಜನರ ಕಲ್ಯಾಣಕ್ಕಾಗಿ ಬಿಜೆಪಿ ಸರ್ಕಾರ ಯಾವುದೇ ಕೆಲಸ ಮಾಡುತ್ತಿಲ್ಲ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಸಲೀಂ ಅಹಮ್ಮದ ಆರೋಪ ಮಾಡಿದರು.