ಹುಬ್ಬಳ್ಳಿ –
ಬಹುದಿನಗಳ ಬೇಡಿಕೆಯ ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಕೊನೆಗೂ ಪ್ಲೈ ಓವರ್ ಕಾಮಗಾರಿಗೆ ನಾಳೆ ಶಂಕುಸ್ಥಾಪನೆ ನಡೆಯಲಿದೆ.ಇದಕ್ಕಾಗಿ ಎಲ್ಲಾ ಸಿದ್ಧತೆಗಳು ನಡೆದಿದ್ದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಇತರೆ ನಾಯಕರ ಪ್ರಯತ್ನದಿಂದ ಈ ಒಂದು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿಯನ್ನು ನೀಡಿದೆ.

ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಈ ಒಂದು ಯೋಜನೆ ಮಾಡಲಾಗಿತ್ತಿದೆ.ಇನ್ನೂ ನಾಳೆಯ ಪೂಜೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಚನ್ನಮ್ಮ ವೃತ್ತದಲ್ಲಿ ಬಿಜೆಪಿ ನಾಯಕರ ಬ್ಯಾನರ್ ಬಂಟಿಂಗ್ಸ್ ಗಳು ರಾರಾಜಿಸುತ್ತಿವೆ.
ಇನ್ನೂ ನಗರದಲ್ಲಿ ಯಾರು ಅನುಮತಿ ಇಲ್ಲದೇ ಬ್ಯಾನರ್ ಹಾಕುವಂತಿಲ್ಲ ಎಂದು ಈ ಹಿಂದೆ ಪಾಲಿಕೆಯ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದು ಈಗ ಎಲ್ಲೆಂದರಲ್ಲಿ ಬೇಕಾ ಬಿಟ್ಟಿಯಾಗಿ ಹಾಕಲಾಗಿದ್ದು ಪಾಲಿಕೆಯ ಅಧಿಕಾರಿಗಳಿಗೆ ಇವುಗಳು ಕಾಣುತ್ತಿಲ್ಲವೇ.ಇನ್ನೂ ಇವೆಲ್ಲದರ ನಡುವೆ ಈ ಒಂದು ಯೋಜನೆಯಿಂದ ಚನ್ನಮ್ಮ ಪ್ರತಿಮೆಗೆ ಅವಮಾನ ಮಾಡಿದಂತಾಗುತ್ತಿದ್ದು ಕೂಡಲೇ ಇದನ್ನು ಕೈಬಿಡುವಂತೆ ಕಾಂಗ್ರೆಸ್ ಪಕ್ಷದ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ಒತ್ತಾಯ ಮಾಡಿದ್ದಾರೆ.