ಧಾರವಾಡ –
ಸಾಮಾನ್ಯವಾಗಿ ಕರೋನಾ ಆರಂಭವಾದಗಿನಿಂದ ಆರ್ಥಿಕತೆಯ ಪರಸ್ಥಿತಿ ತುಂಬಾ ಹದಗೆಟ್ಟಿದೆ. ಅದರಲ್ಲೂ ಪ್ರತಿಯೊಂದು ಕೆಲಸದಲ್ಲೂ ಸಾಕಷ್ಟು ಸಮಸ್ಯೆ ತೊಂದರೆಯಾಗಿದ್ದು ಎಲ್ಲಿ ನೋಡಿದಲ್ಲಿ ಕಂಪನಿಗಳಿಂದ ನೌಕರರಿಗೆ ಗೇಟ್ ಪಾಸ್ ಕೊಟ್ಟು ಕಳಿಸಲಾಗುತ್ತಿದೆ. ಇವೆಲ್ಲದರ ನಡುವೆ ಧಾರವಾಡದ ಪವನ ಭದ್ರತಾ ಸಂಸ್ಥೆಯೊಂದು ದೂರದ ಆಸ್ಸಾಂನಿಂದ ಭದ್ರತಾ ಕರ್ತವ್ಯಕ್ಕೆಂದು 23 ಜನ ಯುವಕರನ್ನು ವಿಮಾನದಲ್ಲಿ ಕರೆದುಕೊಂಡು ಬಂದಿದ್ದಾರೆ.
ಹೌದು ಧಾರವಾಡದ ಪವನ ಸೆಕ್ಯೂರಿಟಿ ಸಂಸ್ಥೆ ಕಳೆದ ಹಲವಾರು ವರುಷಗಳಿಂದ ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕರ ಸ್ನೇಹಿಯಾಗಿ ಕೆಲಸವನ್ನು ಮಾಡುತ್ತಿದ್ದು ಇದಕ್ಕೆ ಮತ್ತೊಂದು ಸಾಕ್ಷಿ ದೂರದ ಆಸ್ಸಾಂ ನಿಂದ ಭದ್ರತೆಗೆ 23 ಜನ ಸಿಬ್ಬಂದಿಗಳನ್ನು ಕರೆದುಕೊಂಡು ಬಂದು ಅವರಿಗೆ ಬದುಕು ನೀಡಿದೆ.
ಯಾವುದೇ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಳ್ಳ ಬೇಕೆಂದರೆ ನೀವೆ ಬನ್ನಿ ಎಂದು ಹೇಳುತ್ತಾರೆ ಆದರೆ ಪವನ ಸೆಕ್ಯೂರಿಟಿ ಸಂಸ್ಥೆ ಮಾತ್ರ ವಿಭಿನ್ನವಾಗಿ ನಮ್ಮ ಮುಂದೆ ನಿಂತಿದೆ.
ಸಂಸ್ಥೆಯ ಮುಖ್ಯಸ್ಥರು ದೂರದ ಆಸ್ಸಾಂ ನಲ್ಲಿರುವ 23 ಜನ ಯುವಕರಿಗೆ ಸಂಸ್ಥೆಯಿಂದ ವಿಮಾನ ಟಿಕೇಟ್ ಬುಕ್ ಮಾಡಿ ಆಸ್ಸಾಂನಿಂದ ಬೆಂಗಳೂರುದವರೆಗೆ ಅಲ್ಲಿಂದ ರಾಯಚೂರು ವರೆಗೆ ಬಸ್ ನಲ್ಲಿ ಕರೆದುಕೊಂಡು ಬರಲಾಗಿದೆ.
ಭದ್ರತಾ ಕರ್ತವ್ಯಕ್ಕೆ ಬರುವ ಯಾವುದೇ ಒಬ್ಬ ಸಿಬ್ಬಂದಿಯಿಂದ ಯಾವುದೇ ಭತ್ಯೆಯನ್ನು ತಗೆದುಕೊಳ್ಳದೇ ಸಂಸ್ಥೆಯಿಂದಲೇ ಎಲ್ಲಾ ವ್ಯವಸ್ಥೆಯನ್ನು ಮಾಡಿ ಯುವಕರನ್ನು ಕರೆದುಕೊಂಡು ಬಂದು ರಾಯಚೂರಿನಲ್ಲಿ ಆಸರೆ ನೀಡಿ ಬದುಕು ನೀಡಿದೆ.
ಪವನ ಸೆಕ್ಯೂರಿಟಿ ಸಂಸ್ಥೆಯಿಂದ ವಿಮಾನದಲ್ಲಿ ಬಂದು ಕೆಲಸಕ್ಕೆ ಸೇರಿಕೊಂಡಿದ್ದಾರೆ.ಜೀವನದಲ್ಲೂ ಯಾವಾಗ ವಿಮಾನದಲ್ಲಿ ಭದ್ರತಾ ಸಿಬ್ಬಂದಿಗಳು ಹೋಗುತ್ತಿದ್ದರು ಬರುತ್ತಿದ್ದರು
ಗೊತ್ತಿಲ್ಲ ಆದರೆ ಸಂಸ್ಥೆಯಂತೂ ಇವರನ್ನು ಲೋಹದ ಹಕ್ಕಿಯಲ್ಲಿ ಕೆಲಸಕ್ಕೆ ಕರೆದುಕೊಂಡು ಬಂದು ದೊಡ್ಡತನವನ್ನು ತೊರಿಸಿ ಬದುಕು ನೀಡಿದೆ. ಇನ್ನೂ ವಿಮಾನದಲ್ಲಿ
ಮೊದಲ ಬಾರಿಗೆ ಬಂದ ಎಲ್ಲಾ ಭದ್ರತಾ ಸಿಬ್ಬಂದಿಗಳು ಸಂಸ್ಥೆಯ ಕೆಲಸಕ್ಕೆ ಸಂತಸಗೊಂಡಿದ್ದು ಖುಷಿ ಖುಷಿಯಿಂದ ಕೈ ತುಂಬ ಸಂಬಳ ಪಡೆಯುತ್ತಾ ರಾಯಚೂರಿನಲ್ಲಿ ಹೊಸ ಕೆಲಸಕ್ಕೆ ಹಾಜರಾಗಿದ್ದಾರೆ ಏನೇ ಆಗಲಿ ಪವನ ಸೆಕ್ಯುರಿಟಿ ಸಂಸ್ಥೆ ಮಾಲೀಕರ ದೊಡ್ಡತನ ಮೆಚ್ಚುವಂತದ್ದು