ಧಾರವಾಡ –
ಪೊಟೊ ಶೂಟ್ ಹೋಗಿದ್ದ ಐವರಲ್ಲಿ ಇಬ್ಬರನ್ನು ರಕ್ಷಣೆ ಮಾಡಿ ಮೂವರು ಕೆನಾಲ್ ನಲ್ಲಿ ಕಣ್ಮರೆಯಾದ ಘಟನೆ ನವಲಗುಂದ ದಲ್ಲಿ ನಡೆದಿದೆ.

ಹೌದು ಪೋಟೊ ಶೂಟ್ ತೆರಳಿದ್ದ 5 ಯುವಕರಲ್ಲಿ ಇಬ್ಬರನ್ನು ರಕ್ಷಣೆ ಮಾಡಿ ಮೂವರು ಕಾಲುವೆಯಲ್ಲಿ ನಾಪತ್ತೆ ಯಾದ ಘಟನೆ ಕಿರೇಸೂರು ಬಳಿ ಇರುವ ಮಲಪ್ರಭಾ ಬಲದಂಡೆಯಲ್ಲಿ ಈ ಒಂದು ಘಟನೆ ನಡೆದಿದೆ.

ಹುಬ್ಬಳ್ಳಿ ರಾಮ ನಗರದ ಒರ್ವ ಯುವತಿ ಸೇರಿ ಪೊಟೊ ಶೂಟ್ ಗಾಗಿ ಬಂದಿದ್ದು. ಕೆನಾಲ್ ಬಳಿ ಬಂದು ಇನ್ನೇನೂ ಪೊಟೊ ಶೂಟ್ ಮಾಡಬೇಕು ಎನ್ನುವಷ್ಟರಲ್ಲಿ.

ಹೆಬ್ಬ ಜೇನು ದಾಳಿ ಮಾಡಿವೆ.ಜೇನು ದಾಳಿಯಿಂದ ಭಯಗೊಂಡ ಐವರು ಕೆನಾಲ್ ನಲ್ಲಿ ಜಿಗಿದ್ದಿದ್ದಾರೆ ಇನ್ನೂ ವಿಷಯ ತಿಳಿದ ಹುಬ್ಬಳ್ಳಿ ಗ್ರಾಮೀಣ ಪೋಲಿಸರು ಇಬ್ಬರನ್ನೂ ರಕ್ಷಣೆ ಮಾಡಿದ್ದಾರೆ.

ನತಾಷಾ ಮತ್ತು ಸಲ್ಮಾನ್ ರಕ್ಷಣೆಗೊಳಗಾಗಿದ್ದು. ಸನ್ನಿ ಗಜಾನನ ಜ್ಯೋತಿ ಕಣ್ಮರೆಯಾಗಿದ್ದಾರೆ.ಸಧ್ಯ ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು ಕಣ್ಮರೆಯಾಗಿರುವವರ ಪತ್ತೆಗಾಗಿ ಕಾರ್ಯಾಚರಣೆ ಮಾಡುತ್ತಿದ್ದಾರೆ.

ಹುಬ್ಬಳ್ಳಿಯ ರಾಮನಗರ ನಿವಾಸಿಗಳಾಗಿದ್ದು ಮಾಜಿ ಮಹಾನಗರ ಪಾಲಿಕೆಯ ಸದಸ್ಯರಾಗಿರುವ ಸುವರ್ಣಾ ಕಲಗುಂಟ್ಲಾ ಮಗನು ಕೂಡಾ ನಾಪತ್ತೆಯಾಗಿದ್ದಾರೆ.ಇನ್ನೂ ಹುಡುಕಾಡ ನಡೆದಿದೆ.

