ಧಾರವಾಡ –
ಶ್ರೀರಾಮ ಮಂದಿರ ಕಟ್ಟಡ ನಿರ್ಮಾಣಕ್ಕಾಗಿ ನಿಧಿ ಸಮರ್ಪಣಾ ಹಿನ್ನಲೆಯಲ್ಲಿ ಧಾರವಾಡದ ಕುಮಾರೇಶ್ವರ ನಗರದಲ್ಲಿ ಬೈಕ್ ರಾಲಿಯನ್ನು ಮಾಡಲಾಯಿತು.
ಧಾರವಾಡದ ಕುಮಾರೇಶ್ವರ ನಗರ ಮತ್ತು ಸುತ್ತಮುತ್ತಲಿನ ಬಡಾವಣೆಯಲ್ಲಿ ಬಡಾವಣೆಯ ಯುವಕರು ಬೈಕ್ ರಾಲಿ ಮಾಡಿದರು.
ಕುಮಾರೇಶ್ವರ ನಗರದ ಈಶ್ವರ ದೇವಸ್ಥಾನದಲ್ಲಿ ಪೂಜೆ ಮಾಡಿ ಬೈಕ ರ್ಯಾಲಿ ಪ್ರಾರಂಭಿಸಲಾಯಿತು ಹಂಪಣ್ಣವರ ಲೇ ಔಟ್ ನಿಂದ-ವೀರಭದ್ರೇಶ್ವರ ನಗರ -ದೇನಾ ಬ್ಯಾಂಕ ಕಾಲೋನಿ – ಬನಶಂಕರಿ ಬಡಾವಣೆ-ಕಾಮಾಕ್ಷಿ ಕಾಲೋನಿ ಸುಂದರ ನಗರ – ಮೂಕಾಂಬಿಕಾ ನಗರ – ಸೈನಿಕ ಕಾಲೋನಿ -ಜೋಶಿ ಫಾರ್ಮ್ ಮಾರ್ಗವಾಗಿ ಕುಮಾರೇಶ್ವರ ನಗರದ ತುಂಬೆಲ್ಲಾ ಸಾಗಿತು.
ನಂತರ ಈಶ್ವರ ದೇವಸ್ಥಾನದಲ್ಲಿ ಈ ಒಂದು ಬೈಕ್ ರಾಲಿ ಮುಕ್ತಾಯಗೊಂಡಿತು.ಇನ್ನೂ ಈ ಒಂದು ರಾಲಿಯ ಮೂಲಕ ಸಾರ್ವಜನಿಕರಿಗೆ ರಾಮ ಮಂದಿನ ನಿರ್ಮಾಣದ ಕುರಿತಂತೆ ನಿಧಿಯನ್ನು ಸಮರ್ಪಣೆ ಮಾಡಲು ಯುವಕರು ಘೋಷಣೆಗಳ ಮೂಲಕ ತಿಳಿಸಿದರು.
ರಾಲಿಯಲ್ಲಿ ಸಂತೋಷ ದೇವರಡ್ಡಿಯವರ, ಜಗದೀಶ ತೋಟದ, ಪ್ರಭು ಹಿರೇಮಠ, ರಮೇಶ ಕುಂಬಾರ, ಅಮಿತ ಬಸಾಪುರ, ಬಸವರಾಜ ಕಿತ್ತೂರ, ಹರೀಶ ಬಿಜಾಪುರ, ಜವರೇಗೌಡರ, ರುದ್ರಪ್ಪ ಉಳ್ಳಾಗಡ್ಡಿ, ದಿನ್ನಿಮಠ, ಕಳ್ಳಿಗುಡ್ಡ, ಹಲಗತ್ತಿ, ಹೊಸಮನಿ, ಮುಹಾಂತೇಶ ವಿರಕ್ತಮಠ, ಶ್ರೀಕಾಂತ ಹಳ್ಳಿಗೇರಿಮಠ, ರಾಜೇಶ್ವರಿ ಸಾಲಗಟ್ಟಿ, ರಾಜೇಶ್ವರಿ ಕಬ್ಬೂರ, ವರ್ಷಾ ಕುಂಬಾರ, ಮಂಜುನಾಥ ಹಿರೇಮಠ ,
ಜಯತೀರ್ಥ ಮಳಗಿ ಶಶಿಧರ ಮುಂದಿನಮನಿ ಬಸವರಾಜ ಶೀಲವಂತರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಇನ್ನೂ ಬೈಕ್ ರಾಲಿಯಲ್ಲಿ ಪ್ರಮುಖವಾಗಿ ಸಾಯಿ ಪ್ರಥಮ ಕುಂಬಾರ ಬಾಲಕ ರಾಜರಾಮ್ ಉಡುಗೆ, ಇರ್ನೊರ್ವ ಬಾಲಕ ಅಭಯ ಕುಂಬಾರ ಕಾಡಿನ ರಾಮ ಉಡುಗೆಗಳಲ್ಲಿ ಪಾಲ್ಗೊಂಡು ರಾಲಿ ತುಂಬೆಲ್ಲಾ ಒಂದು ಸುತ್ತು ಹಾಕಿದರು.