ಧಾರವಾಡ
ವೀರಶೈವ ಲಿಂಗಾಯತ ಮರಾಠ ನಿಗಮಕ್ಕೇ ಸ್ವಾಗತಿಸಿ ಧಾರವಾಡದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವವನ್ನು ಆಚರಣೆ ಮಾಡಲಾಯಿತು. ವೀರಶೈವ ಮತ್ತು ಲಿಂಗಾಯತ ಅಭಿವೃದ್ದಿ ನಿಗಮಕ್ಕೇ ಮುಖ್ಯಮಂತ್ರಿ ಆದೇಶ ನೀಡುತ್ತಿದ್ದಂತೆ ಇತ್ತ ಧಾರವಾಡದಲ್ಲಿ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಎರಡು ನಿಮಗದ ಆರಂಭಕ್ಕೇ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಸ್ವಾಗತಿಸುವ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ವಿಜಯೋತ್ಸವ ಮಾಡಿದರು. ನಗರದ ಜುಬಲಿ ವೃತ್ತದಲ್ಲಿನ ಬಸವೇಶ್ವರ ಪ್ರತಿಮೆಗೆ ಮಾಜಿ ಶಾಸಕಿ ಸೀಮಾ ಮಸೂತಿ ನೇತತ್ವದಲ್ಲಿ ಮಾಲಾರ್ಪಣೆ ಮಾಡಿ ವಿಜಯೋತ್ಸವವನ್ನು ಆಚರಣೆ ಮಾಡಲಾಯಿತು.
ಮೊದಲು ವಿಶ್ವಗುರು ಬಸವೇಶ್ವರರಿಗೆ ಸಾಮೂಹಿಕವಾಗಿ ಮಾಲಾರ್ಪಣೆ ಮಾಡಿದರು.ನಂತರ ಇತ್ತ ಶಿವಾಜಿ ವೃತ್ತದಲ್ಲಿರುವ ಶಿವಾಜಿ ಪ್ರತಿಮೆಗೆ ಕೂಡಾ ಮಾಲಾರ್ಪಣೆ ಮಾಡಿದರು. ಅಲ್ಲೂ ಕೂಡಾ ನಂತರ ಪಟಾಕಿ ಸಿಡಿಸಿ ವಿಜಯೋತ್ಸವವನ್ನು ಆಚರಣೆ ಮಾಡಲಾಯಿತು.
ಇದೇ ವೇಳೆ ಸಿಹಿ ತಿನ್ನಿಸಿ ಸಂಬ್ರಮಿಸಿ ಮುಖ್ಯಮಂತ್ರಿ ನಿರ್ಧಾರವನ್ನು ಸ್ವಾಗತಿಸಿದ್ರು.ಇನ್ನೂ ಈ ಒಂದು ಕಾರ್ಯಕ್ರಮವು ಮಾಜಿ ಶಾಸಕಿ ಸೀಮಾ ಮಸೂತಿ ನೇತ್ರತ್ವದಲ್ಲಿ ನಡೆದಿದ್ದು ಇವರೊಂದಿಗೆ ಸಂಗನಗೌಡ ರಾಮನಗೌಡರ ,ರುದ್ರಪ್ಪ ಹರಿವಾನ, ಸುನೀನ ಮೋರೆ, ಶಂಕರ ಶೇಳಕೆ,ಮಹೇಶ ಯಲಿಗಾರ,ಶಿವು ಬೆಳಾರದ ಶಂಕರ ಕೋಮಾರದೇಸಾಯಿ ,ರಾಜು ಜಿವನ್ನವರ
ಸಂಬಾಜೀ ಜಾಧವ ,ಯಲ್ಲಪ್ಪ ಜಾನೂಕನವರ ,ಮಲ್ಲಿಕಾರ್ಜನ ಗೋಕಾವಿ ,ವಿಕ್ರಮ ಹುಣಸಿಕಟ್ಟಿ, ವೀರನಗೌಡ ಪಾಟೀಲ, ಸಿದ್ದನಗೌಡ ಪಾಟೀಲ ,ಈರಯ್ಯ ಹಿರೇಮಠ, ಗೋಮಿಂದ ಮಮ್ಮಿಗಟ್ಟಿ, ಸೇರಿದಂತೆ ಹಲವರು ಹಾಗೇ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಕಾರ್ಯಕರ್ತರು ಇತ್ತ ಮರಾಠ ಸಮಾಜದ ಹಿರಿಯರು ಮುಖಂಡರು ಕಾರ್ಯಕರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.