ಧಾರವಾಡ: –
ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಧಾರವಾಡ ಜಿಲ್ಲೆಯಲ್ಲಿನ 7 ವಿಧಾನಸಭಾ ಮತಕ್ಷೇತ್ರಗಳ ಮತದಾರರ ಯಾದಿಯ ವಿಶೇಷ ಪರಿಷ್ಕರಣೆ-2021 ನ್ನು ಸಿದ್ದ ಮಾಡಿ ಪ್ರಕಟ ಮಾಡಲಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಅರ್ಹತಾ ದಿನಾಂಕ : 01-01-2021 ಕ್ಕೆ ಇದ್ದಂತೆ ದಿನಾಂಕ:18-11-2020 ರಂದು ಕರಡು ಮತದಾರರ ಯಾದಿಯನ್ನು ಜಿಲ್ಲೆಯಲ್ಲಿ ಪ್ರಕಟಿಸಲಾಗಿದೆ ಎಂದರು.ಈ ಕುರಿತು ಪ್ರಕಟಣೆ ನೀಡಿರುವ ಅವರು ಸದರಿ ಕರಡು ಮತದಾರರ ಯಾದಿಯನ್ನು ಜಿಲ್ಲೆಯ ಎಲ್ಲ ಚುನಾವಣೆ ಶಾಖೆಗಳು, ತಹಶೀಲ್ದಾರ ಕಛೇರಿಗಳು ಮತ್ತು ಗ್ರಾಮ ಠಾಣಾಗಳಲ್ಲಿ ನವೆಂಬರ್ 18, 2020 ರಂದು ಪ್ರಕಟಿಸಿದ್ದು, ಸಾರ್ವಜನಿಕರು ಮತದಾರರ ಯಾದಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ತೆಗೆದುಹಾಕುವಿಕೆ, ಸ್ಥಳಾಂತರಕ್ಕಾಗಿ ಮತ್ತು ಆಕ್ಷೇಪಣೆಗಳು ಇದ್ದಲ್ಲಿ ನಿಗಧಿತ ನಮೂನೆಗಳನ್ನು ಭರಿಸಿ ಸಲ್ಲಿಸಬಹುದಾಗಿದೆ.ಹೆಸರು ಸೇರ್ಪಡೆಗೆ ನಮೂನೆ-6, ಹೆಸರು ತೆಗೆದು ಹಾಕುವಿಕೆಗೆ ನಮೂನೆ-7, ತಿದ್ದುಪಡೆಗೆ ನಮೂನೆ-8, ಹಾಗೂ ವಿಧಾನಸಭಾ ಕ್ಷೇತ್ರದಲ್ಲಿ ವಿಳಾಸ ಬದಲಾವಣೆಗೆ ನಮೂನೆ-8ಎ ನೇದ್ದನ್ನು ಭರ್ತಿಮಾಡಿ ಮತಗಟ್ಟೆ ಅಧಿಕಾರಿಗಳಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ ಎಂದರು.
ಇನ್ನೂ ಸಾರ್ವಜನಿಕರು ದಿನಾಂಕ 18-11-2020 ರಿಂದ 17-12-2020 ರವರೆಗೆ ಈಗಿರುವ ಕರಡು ಮತದಾರರ ಯಾದಿಯಲ್ಲಿ ಆಕ್ಷೇಪಣೆ ಸಲ್ಲಿಸಲು ನವೆಂಬರ್ 18 ರಿಂದ ಡಿಸೆಂಬರ್ 17, 2020 ರವರೆಗೆ ಆವಕಾಶವಿದ್ದು, ಸದರಿ ಅವಧಿಯಲ್ಲಿ ಸ್ವೀಕರಿಸಿದ ಹಕ್ಕು ಮತ್ತು ಆಕ್ಷೇಪಣೆಗಳ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ದಿನಾಂಕ :07-01-2021 ರಂದು ವಿಲೇವಾರಿಗೊಳಿಸಲಾಗುವುದು.ನಂತರ ಮತದಾರ ಯಾದಿಯ ಪುರವಣಿ ಪಟ್ಟಿಯನ್ನು ದಿನಾಂಕ :14-01-2021 ರಂದು ತಯಾರಿಸಿ, ಅಂತಿಮ ಮತದಾರರ ಪಟ್ಟಿಯನ್ನು ದಿನಾಂಕ 18-01-2021 ರಂದು ಪ್ರಕಟಗೊಳಿಸಲಾಗುವುದು.ಹೀಗಾಗಿ ಸಾರ್ವಜನಿಕರು ಮತ್ತು ಅರ್ಹ ಮತದಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.