ಧಾರವಾಡ –
ಧಾರವಾಡ ತಾಲ್ಲೂಕಿನಲ್ಲಿ ಮತ್ತೊಂದು ಗ್ರಾಮ ಪಂಚಾಯತಿ ಬಿಜೆಪಿ ಪಾಲಾಗಿದೆ. ಧಾರವಾಡದ ಗರಗ ಗ್ರಾಮ ಪಂಚಾಯತಿಯನ್ನು ಬಿಜೆಪಿ ಪಕ್ಷ ತನ್ನ ತೆಕ್ಕೆಗೆ ಹಾಕಿಕೊಂಡಿದೆ ಈಗ
ಇಂದು ನಡೆದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯನ್ನು ಮಾಡಲಾಯಿತು. ಅಧ್ಯಕ್ಷ ಸ್ಥಾನ ಮಹಿಳಾ ಮೀಸಲಾತಿ ಇತ್ತು ಹೀಗಾಗಿ ಲಕ್ಷ್ಮೀ ನಾಗಪ್ಪ ಕಾಶಿಗಾರ ಆಯ್ಕೆಯಾದರು.
ಇನ್ನೂ ಉಪಾಧ್ಯಕ್ಷರಾಗಿ ಫಕೀರಪ್ಪ ನಿಂಗಪ್ಪ ಕಟ್ಟಿಮನಿ ಆಯ್ಕೆಯಾದರು.ಒಟ್ಟು 27 ಗ್ರಾಮ ಪಂಚಾಯತಿ ಸದಸ್ಯರ ಬಲವನ್ನು ಹೊಂದಿದ್ದ ಗರಗ ಗ್ರಾಮ ಪಂಚಾಯತಿಯಲ್ಲಿ 24 ಜನ ಬಿಜೆಪಿ ಪಕ್ಷದ ಬೆಂಬಲಿತರಾಗಿದ್ದರು. ಹೀಗಾಗಿ ಎರಡು ಸ್ಥಾನಕ್ಕೆ ಇಬ್ಬರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಇನ್ನೂ ಗರಗ ಗ್ರಾಮ ಪಂಚಾಯತಿಗೆ ಅಧ್ಯಕ್ಷ ಉಪಾಧ್ಯಕ್ಷ ರಾಗಿ ಆಯ್ಕೆಯಾಗುತ್ತಿದ್ದಂತೆ ಬೆಂಗಳೂರಿನಲ್ಲಿದ್ದ ಧಾರವಾಡದ ಗ್ರಾಮೀಣ ಕ್ಷೇತ್ರದ ಶಾಸಕರಾದ ಅಮೃತ ದೇಸಾಯಿ ಅವರು ದೂರವಾಣಿ ಕರೆ ಮಾಡಿ ಅಭಿನಂದನೆಗಳನ್ನು ಹೇಳಿದರು.
ಇನ್ನೂ ಈ ಒಂದು ಸಂದರ್ಭದಲ್ಲಿ ಅಶೋಕ್ ದೇಸಾಯಿ,ಪರಮೇಶ ಉಳವನ್ನವರ, ಅರವಿಂದಗೌಡ ಪಾಟೀಲ್, ಶಿವಾನಂದ ಉಳವನ್ನವರ,ಪ್ರಕಾಶಗೌಡ ಪಾಟೀಲ್, ಬಸವರಾಜ ಬುಡರಕಟ್ಟಿ,ಸಂತೋಷ ಶೇಟೊಜಿ,ಮಹೇಶ್ ಯಲಿಗಾರ,ವೆಂಕು ಯಲಿಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.