ಧಾರವಾಡ –
ಮನಶ್ವಿನಿ ಯೋಜನೆಗೆ ಹಣ ಬಿಡುಗಡೆ ಮಾಡಲು 600 ರೂಪಾಯಿ ಬೇಡಿಕೆ ಇಟ್ಟಿದ್ದ ಕಂದಾಯ ನಿರೀಕ್ಷಿಕ ಎಸಿಬಿ ಬಲೆಗೆ ಬಿದ್ದಿದ್ದಾನೆ. ಹೌದು ಕುಂದಗೋಳದ ಕಂದಾಯ ಇಲಾಖೆಯಲ್ಲಿ ಈ ಒಂದು ದಾಳಿ ನಡೆದಿದೆ. ಕಂದಾಯ ನಿರೀಕ್ಷಿಕ ಶಿವಾನಂದ ಶಿರಹಟ್ಟಿ ಎಂಬುವರು ಬೆಟದೂರಿನ ಮಹಿಳೆಯೊಬ್ಬರಿಗೆ ಮದುವೆಯಾದ ಹಿನ್ನಲೆಯಲ್ಲಿ ಮನಶ್ವಿನಿ ಯೋಜನೆಯಲ್ಲಿ ಫಲಾನುಭವಿ ಹಣವನ್ನು ಬಿಡುಗಡೆ ಮಾಡಲು 600 ರೂಪಾಯಿ ಬೇಡಿಕೆ ಇಟ್ಟಿದ್ದರು. ಈ ಕುರಿತಂತೆ ಮಹಿಳೆ ಎಸಿಬಿ ಗೆ ದೂರನ್ನು ನೀಡಿದ್ದಳು.
ದೂರಿನ ಹಿನ್ನಲೆಯಲ್ಲಿ ಕಾರ್ಯಾಚರಣೆ ಮಾಡಿದ ಎಸಿಬಿ ಡಿಎಸ್ಪಿ ವೇಣುಗೊಪಾಲ, ಇನಸ್ಪೇಕ್ಟರ್ ಅಧಿಕಾರಿಗಳಾದ ಜಾಧವ, ಮತ್ತು ಹಿರೇಮಠ ಇವರ ನೇತ್ರತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 600 ರೂಪಾಯಿಗೆ ಬೇಡಿಕೆ ಇಟ್ಟದ್ದ ಕಂದಾಯ ನಿರೀಕ್ಷಿಕನನ್ನು ಬಲೆಗೆ ಹಾಕಲಾಗಿದೆ. ಇನ್ನೂ ಹಣದ ಸಮೇತ ಕಂದಾಯ ನಿರೀಕ್ಷಿಕನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದು ಈ ಒಂದು ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಲೊಕೇಶ ಬೆಂಡಿಕಾಯಿ, ಶ್ರೀಶೈಲ ಮನಸೂರು, ಗಿರೀಶ ಮನಸೂರು,ಕಟ್ಟಿಯವರು. ಮತ್ತು ಕಾರ್ತಿಕ ಹುಯಿಲಗೋಳ ಸೇರಿದಂತೆ ಹಲವು ಸಿಬ್ಬಂದಿಗಳು ಪಾಲ್ಗೊಂಡಿದ್ದರು.