ಹುಬ್ಬಳ್ಳಿ –
ಖೋಟಾ ನೋಟು ಜಾಲವನ್ನು ಹುಬ್ಬಳ್ಳಿಯಲ್ಲಿ ಕೇಶ್ವಾಪೂರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕೇಶ್ವಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಖೋಟಾ ನೋಟು ಜಾಲವನ್ನು ಪೊಲೀಸರು ಪತ್ತೆ ಹಚ್ಚಿ ಮೂವರು ಪ್ರಮುಖವಾದ ಆರೋಪಿಗಳನ್ನು ಬಂಧನ ಮಾಡಿದ್ದಾರೆ.
ಹುಬ್ಬಳ್ಳಿಯ ಕೇಶ್ವಾಪೂರ ಠಾಣಾ ಹದ್ದಿಯಲ್ಲಿ 04 ಜನರು ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ದಾಳಿ ಮಾಡಲಾಗಿದೆ.
ಕೆ. ರಾಮ್‍ರಾಜನ್, ಉಪ ಪೊಲೀಸ್ ಆಯುಕ್ತರು, ಮತ್ತು ಆರ್ ಬಿ ಬಸರಗಿ, ಉಪ ಪೊಲೀಸ್ ಆಯುಕ್ತರು, ಹುಬ್ಬಳ್ಳಿ-ಧಾರವಾಡ ರವರ ಮಾರ್ಗದರ್ಶನದಲ್ಲಿ ಕೇಶ್ವಾಪೂರ ಪೊಲೀಸ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸುರೇಶ ಜಿ ಕುಂಬಾರ ಮತ್ತು ಸಿಬ್ಬಂದಿ ತಂಡವು ಕಾರ್ಯಾಚರಣೆ ಮಾಡಿ ಜಾಲವನ್ನು ಪತ್ತೆ ಹಚ್ಚಿದ್ದಾರೆ.
ಗೋಪಿನಾಥ ಜಗನ್ನಾಥ ಹಬೀಬ. ಹುಬ್ಬಳ್ಳಿ.
ಶ್ರೀನಿವಾಸ ವಾಸಪ್ಪ ತಟ್ಟಿ, ಹಳೇಹುಬ್ಬಳ್ಳಿ. ಮೌಲಾಸಾಬ ಮುಕ್ತಂಸಾಬ ಗೂಡಿಹಾಳ, ದೇವರಗುಡಿಹಾಳ.ಸಲಿಂ ಇಮಾಮಸಾಬ ಮುಲ್ಲಾ ಹಳೇಹುಬ್ಬಳ್ಳಿ ಬಂಧಿತರಾಗಿದ್ದಾರೆ.
ಇವರು 500 ರೂ ಮುಖ ಬೆಲೆಯ 93 ಖೋಟಾ ನೋಟುಗಳನ್ನು ಹಾಗೂ 100 ರೂ ಮುಖ ಬೆಲೆಯ 200 ಖೋಟಾ ನೋಟುಗಳನ್ನು ( ಒಟ್ಟು 66,500-00 ರೂ ಮೌಲ್ಯದ ಖೋಟಾ ನೋಟುಗಳನ್ನು) ಹಾಗೂ 500 ರೂ ಮುಖ ಬೆಲೆಯ 10 ಅಸಲಿ ನೋಟುಗಳನ್ನು ಮತ್ತು 100 ರೂ ಮುಖ ಬಲೆಯ 02 ಅಸಲಿ ನೋಟುಗಳನ್ನು ( ಒಟ್ಟು 5200-00 ರೂ ಮೌಲ್ಯದ ಅಸಲಿ ನೋಟುಗಳನ್ನು) ವಶಪಡಿಸಿಕೊಳ್ಳಲಾಗಿದೆ.
ಅಲ್ಲದೆ ಸದರಿ ಆರೋಪಿತರಿಂದ 04 ವಿವಿಧ ಕಂಪನಿಯ ಮೊಬೈಲ್ ಪೋನ್ ಸಹ ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜಪಡಿಸಿದ್ದಾರೆ. ಸದರಿ ಆರೋಪಿತರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತನಿಖೆ ಮುಂದುವರೆಸಿದ್ದಾರೆ.ಇನ್ನೂ ಈ ಪ್ರಕರಣವನ್ನು ಪತ್ತೆ ಹಚ್ಚಿದ ಕೇಶ್ವಾಪೂರ ಪೊಲೀಸ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸುರೇಶ ಜಿ ಕುಂಬಾರ ಮತ್ತು ಸಿಬ್ಬಂದಿಯವರ ಕಾರ್ಯವೈಖರಿಗೆ ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ಇವರು ಶ್ಲಾಘಿಸಿದ್ದಾರೆ.